ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕ್ರಿಕೆಟಿಗ ಶಿಖರ್ ಧವನ್ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯ ಮಾನಸಿಕ ಹಿಂಸೆ ಒಳಗಾಗಿದ್ದಾರೆ ಎಂಬ ಅಭಿಪ್ರಯಾದ ಮೇರೆಗೆ ಕ್ರಿಕೆಟಿಗ ಶಿಖರ್ ಧವನ್ ಮತ್ತು ಅವರ ಪತ್ನಿ ಆಯೇಷಾ ಮುಖರ್ಜಿಗೆ ದೆಹಲಿ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ.
ಪತ್ನಿ ಆಯೇಷಾ ಅವರ ಕ್ರೌರ್ಯದಿಂದಾಗಿ ಶಿಖರ್ ಧವನ್ ವಿಚ್ಛೇದನದ ತೀರ್ಪು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಧವನ್ ತಮ್ಮ ಮಗನಿಂದ ಬೇರ್ಪಟ್ಟು ಬದುಕುವಂತೆ ಒತ್ತಡ ಹೇರಿ ತನಗೆ ಮಾನಸಿಕ ನೋವುಂಟು ಮಾಡಿದ್ದಾಳೆ ಎಂಬುದನ್ನು ನ್ಯಾಯಾಲಯ ನಂಬಿದೆ. ಹಾಗಾಗಿಯೇ ಅವರ 11 ವರ್ಷದ ವಿವಾಹವನ್ನು ರದ್ದುಗೊಳಿಸಿ ಕೌಟುಂಬಿಕ ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ದಂಪತಿಯ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ವಿವಾಹವು ಬಹಳ ಹಿಂದೆಯೇ ಮುರಿದುಬಿದ್ದಿದ್ದು, ಪತಿ-ಪತ್ನಿಯಾಗಿ ಜೀವನ ನಡೆಸುತ್ತಿಲ್ಲ ಎಂಬುದಾಗಿ ತಿಳಿಸಿದರು.