ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಮೈಲಾಡುತುರೈನಲ್ಲಿರುವ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದೆ. ಈ ವೇಳೆ ಗೋದಾಮಿನೊಳಗೆ ಇದ್ದ ನಾಲ್ವರು ಮೃತಪಟ್ಟಿದ್ದು, ನಾಲ್ವರಿಎಗ ಗಂಭೀರವಾದ ಗಾಯಗಳಾಗಿವೆ.
ಮಾಣಿಕ್ಕಂ, ಮದನ್, ರಾಘವನ್ ಹಾಗೂ ನಿಕೇಶ್ ಮೃತರು. ಗಾಯಗೊಂಡವರನ್ನು ಮೈಲಾಡುತುರೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಡೌನ್ ಮಾಲೀಕ ಮೋಹನ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಕಾರ್ಮಿಕರ ಸಾವಿಗೆ ಸಿಎಂ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಮೂರು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೈಕೆ ಮಾಡುವಂತೆ ಸೂಚನೆ ನೀಡಿದ್ದಾರೆ.
ರಾಮ್‌ದಾಸ್ ಫೈರ್‌ವರ್ಕ್ಸ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ಮದುವೆ, ಸಮಾರಂಭಗಳಿಗಾಗಿ ಪಟಾಕಿ ತಯಾರಿ ಮಾಡುತ್ತಿತ್ತು. ಜತೆಗೆ ದೀಪಾವಳಿ ಸಮೀಪದಲ್ಲೇ ಇದ್ದು, ಹೆಚ್ಚು ಸಪ್ಲೇಗಾಗಿ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಲಾಗಿತ್ತು.
ಇದ್ದಕ್ಕಿದ್ದಂತೆಯೇ ಭಾರೀ ಸದ್ದು ಕೇಳಿಸಿತು, ಕ್ಷಣಮಾತ್ರದಲ್ಲಿ ಓರ್ವ ವ್ಯಕ್ತಿಯ ದೇಹದ ಭಾಗಗಳು ಅಲ್ಲಲ್ಲಿ ಕಾಣಿಸಿದವು, ಐದು ಕಿಲೋಮೀಟರ್‌ವರೆಗೂ ಸದ್ದು ಕೇಳಿತು, ನಾವೆಲ್ಲ ಓಡಿ ಬಂದೆವು ಎಂದು ಸ್ಥಳೀಯರು ಹೇಳಿದ್ದಾರೆ.