Sunday, December 3, 2023

Latest Posts

ಸತ್ಯೇಂದರ್‌ ಜೈನ್‌ ವಿಡಿಯೋ ಲೀಕ್‌ ಪ್ರಕರಣ: ಇಡಿ ಅಧಿಕಾರಿಗಳಿಗೆ‌ ದೆಹಲಿ ಕೋರ್ಟ್ ನೋಟಿಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯ ಮಾಜಿ ಸಚಿವ ಮತ್ತು ಎಎಪಿ ನಾಯಕ ಸತ್ಯೇಂದ್ರ ಜೈನ್‌ಗೆ ಮಸಾಜ್ ಮಾಡುತ್ತಿರುವ ವೀಡಿಯೊ ಜೈಲಿನಿಂದ ಬಿಡುಗಡೆಯಾದ ಬಳಿಕ ದೆಹಲಿ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಸತ್ಯೇಂದ್ರ ಜೈನ್ ಅವರ ಕಾನೂನು ತಂಡವು ಜೈಲಿನ ಸಿಸಿಟಿವಿ ದೃಶ್ಯಾವಳಿಗಳ ಸೋರಿಕೆ ಕುರಿತು ದೆಹಲಿ ನ್ಯಾಯಾಲಯವನ್ನು ಸಂಪರ್ಕಿಸಿದೆ. ನ್ಯಾಯಾಲಯದಲ್ಲಿ ನೀಡಿದ ಭರವಸೆಯನ್ನು ನಿರ್ಲಕ್ಷಿಸಿ ಇಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡಿದೆ ಎಂದು ಜೈನ್ ಅವರ ಕಾನೂನು ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ತನಿಖೆಯ ಹೊರತಾಗಿಯೂ ವೀಡಿಯೊ ಹೇಗೆ ಸೋರಿಕೆಯಾಯಿತು ಎಂದು ನ್ಯಾಯಾಲಯವು ಇಡಿಯನ್ನು ಪ್ರಶ್ನಿಸಿದೆ. ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ನೇತೃತ್ವದ ಪೀಠವು ಇಡಿಗೆ ನೋಟಿಸ್ ಕಳುಹಿಸಿದ ನಂತರ ಪ್ರಕರಣದ ವಿಚಾರಣೆಯನ್ನು ನವೆಂಬರ್ 21 ಕ್ಕೆ ಮುಂದೂಡಿದರು. ತಿಹಾರ್ ಜೈಲಿನಲ್ಲಿ ಸತ್ಯೇಂದರ್ ಜೈನ್‌ಗೆ ಹೆಡ್ ಮಸಾಜ್, ಫುಟ್ ಮಸಾಜ್ ಮತ್ತು ಬ್ಯಾಕ್ ಮಸಾಜ್‌ನಂತಹ ಸೌಲಭ್ಯಗಳೊಂದಿಗೆ ವಿಐಪಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಡಿ ಈ ಹಿಂದೆ ಹೇಳಿದ್ದರಿಂದ ಇತ್ತೀಚೆಗೆ ಬಿಡುಗಡೆಯಾದ ವೀಡಿಯೊ ಚರ್ಚೆಗೆ ಕಾರಣವಾಗಿದೆ. ದೆಹಲಿ ಸಚಿವರು ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಿರುವ ಕುರಿತು ಹಣಕಾಸು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಸಾಕ್ಷ್ಯ ಸಲ್ಲಿಸಿದ್ದರಿಂದ ಜೈಲಿನ ಅಧಿಕಾರಿಯನ್ನು ಅಮಾನತು ಕೂಡ ಮಾಡಲಾಗಿದೆ.

ವಿಡಿಯೋ ಕುರಿತು ಪ್ರತಿಕ್ರಿಯಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ಬಿದ್ದು, ಅವರ ಬೆನ್ನಿಗೆ ಗಾಯವಾಗಿತ್ತು. ಜೊತೆಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳೂ ಇವೆ. ವೈದಯರ ಸಲಹೆ ಮೇರೆಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋವನ್ನು ಮಸಾಜ್‌ ಎಂದು ಹೇಳಿ ಸುಳ್ಳು ಆರೋಪ ಮಾಡುತ್ತಿರುವುದಾಗಿ ಕಿಡಿ ಕಾರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!