Tuesday, March 28, 2023

Latest Posts

ದೆಹಲಿಯ ಹಿಟ್ ಅಂಡ್ ರನ್ ಕೇಸ್: ಅಂಜಲಿ ಮದ್ಯಪಾನ ಮಾಡಿರುವುದು ಬಹಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಹೊಸ ವರ್ಷಾಚರಣೆಯಂದು ನಡೆದ ಹಿಟ್ ಅಂಡ್ ರನ್ ಕೇಸ್ ನಲ್ಲಿ ಸಾವನ್ನಪ್ಪಿದ ಯುವತಿ ಅಂಜಲಿ ಘಟನೆ ವೇಳೆ ಮದ್ಯಪಾನ ಮಾಡಿದ್ದಳೆಂಬುದು ಬಯಲಾಗಿದೆ.

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 20ರ ಹರೆಯದ ಯುವತಿ ಸ್ಕೂಟಿಗೆ ಕಾರ್ ಗೆ ಡಿಕ್ಕಿ ಹೊಡೆದು ಎಳೆದೊಯ್ದು ಕೊಂದ ಕಂಜಾವಾಲಾ ಘಟನೆಯ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಸಂತ್ರಸ್ತೆಯ ಎಫ್ ಎಸ್ ಎಲ್ ಪರೀಕ್ಷೆಯ ವರದಿಯನ್ನು ಸ್ವೀಕರಿಸಿದ್ದಾರೆ. ಇದ್ರಲ್ಲಿ ಸಂತ್ರಸ್ತೆ ಅಂಜಲಿ ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದು ಬಂದಿದೆ.

ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್) ಪರೀಕ್ಷೆಯನ್ನು ನಡೆಸಿದ್ದು, ಜನವರಿ 24 ರಂದು ಯುವತಿಯ ಒಳಾಂಗಗಳ ವರದಿಯನ್ನು ಸ್ವೀಕರಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ ವಲಯ II) ಸಾಗರ್ ಪ್ರೀತ್ ಹೂಡಾ ತಿಳಿಸಿದ್ದಾರೆ. ಈ ಪರೀಕ್ಷೆಯು ಪ್ರಕರಣದ ತನಿಖೆಯ ಭಾಗವಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!