Tuesday, March 28, 2023

Latest Posts

ಇದು ನಿಜವಾದ ಪ್ರೀತಿ: ಸಿದ್ಧಾರ್ಥ್-ಕಿಯಾರಾ ಜೋಡಿಯನ್ನು ಹಾಡಿ ಹೊಗಳಿದ ಕಂಗನಾ ರಣಾವತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ನ ಹೊಸ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra)- ಕಿಯಾರಾ ಹಸೆಮಣೆ ಏರಲು ಸಜ್ಜಾಗಿದ್ದು, ರಾಜಸ್ತಾನದ ಸೂರ್ಯಗಡನಲ್ಲಿ ಅದ್ದೂರಿಯಾಗಿ ಮದುವೆಗೆ (Wedding) ಸಿದ್ಧತೆ ನಡೆಯುತ್ತಿದೆ.

ಇದರ ನಡುವೆ ಇವರ ಪ್ರಿಯನ್ನು ಕಂಗನಾ ನಿಜವಾದ ಪ್ರೀತಿ ಎಂದು ಹೇಳುವ ಮೂಲಕ ಹಾರೈಸಿದ್ದಾರೆ.ಮದುವೆ ಕುರಿತು ಇಬ್ಬರು ಮೌನವಾಗಿದ್ದಾರೆ. ಆದರೆ ಕಂಗನಾ ಈ ಜೋಡಿಗೆ ಶುಭ ಹಾರೈಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಟ ಸಿದ್ದಾರ್ಥ್ ಹಾಗೂ ಕಿಯಾರಾ ಅವರು ಜೊತೆಯಾಗಿ ಇರುವ ಅಪರೂಪದ ವಿಡಿಯೋವನ್ನು ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿ ಎಷ್ಟು ಚೆನ್ನಾಗಿ ಕಾಣುತ್ತಿದೆ. ಚಿತ್ರರಂಗದಲ್ಲಿ ನಾವು ನಿಜವಾದ ಪ್ರೀತಿಯನ್ನು ನೋಡುವುದು ತುಂಬ ವಿರಳ ಎಂದು ಕಂಗನಾ ಅವರು ಕ್ಯಾಪ್ಷನ್ ನೀಡಿದ್ದಾರೆ. ಇಬ್ಬರದ್ದು ನಿಜವಾದ ಪ್ರೀತಿ ಎಂದು ಹೊಗಳಿದ್ದಾರೆ. ಹಾಗೆಯೇ ಕಿಯಾರಾ- ಸಿದ್‌ಗೆ ಟ್ಯಾಗ್ ಮಾಡಿದ್ದಾರೆ.

ʻಷೇರ್‌ಷಾʼ ಕಪಲ್ ಮದುವೆಗೆ ಬಾಲಿವುಡ್‌ನಿಂದ ಅಂದಾಜು 100 ಜನರು ಈ ವಿವಾಹದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದವರು ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!