Thursday, June 1, 2023

Latest Posts

17 ಕೋಟಿ ರೂ. ಮೌಲ್ಯದ ಕೊಕೇನ್ ಸಾಗಿಸಲು ಕಿಲಾಡಿ ಲೇಡಿ ಸ್ಕೆಚ್, ಜಾಲ ಬೇಧಿಸಿದ ಕಸ್ಟಮ್ಸ್‌ ಡಾಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಚಲನವಲನವನ್ನು ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ತಪಾಸಣೆ ನಡೆಸುತ್ತಿದ್ದರೂ ಅಕ್ರಮ ದಂಧೆ ಮುಂದುವರಿದಿದೆ. ಇದರ ಭಾಗವಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 17 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಕಸ್ಟಮ್ಸ್ ತರಬೇತಿ ಪಡೆದ ನಾಯಿ ತಾಂಜಾನಿಯಾದ ಕಿಲಾಡಿಯನ್ನು ಪತ್ತೆ ಮಾಡಿದೆ.

ಕೊಕೇನ್ ಅನ್ನು ಲಿಕ್ವಿಡ್ ಆಗಿ ಪರಿವರ್ತಿಸಿ ಮದ್ಯದ ಬಾಟಲಿಗಳಲ್ಲಿ ತುಂಬಿ ಮದ್ಯದ ಬಾಟಲಿ ಸಿಗುತ್ತಿದ್ದಂತೆ ಬಿಲ್ಡಪ್ ಕೊಟ್ಟಿದ್ದಾರೆ. ಆದಾಗ್ಯೂ, ತರಬೇತಿ ಪಡೆದ ನಾಯಿ ಇವರ ಮರ್ಮವನ್ನು ಬಟಾಬಯಲು ಮಾಡಿದೆ.

ವಿದೇಶದಿಂದ ಬರುವ ಪ್ರಯಾಣಿಕರಿಗೆ ನಿಯಮದ ಪ್ರಕಾರ 3 ಬಾಟಲಿ ಮದ್ಯ ತರಲು ಅವಕಾಶವಿದೆ. ಮದ್ಯದ ಬಾಟಲಿಗಳನ್ನು ಯಾರೂ ಪರಿಶೀಲಿಸದ ಕಾರಣ ಮದ್ಯದ ಬಾಟಲಿಗಳಲ್ಲಿ ಕೊಕೇನ್ ಬೆರೆಸಿ ಸಾಗಿಸಲು ಯತ್ನಿಸಿದ್ದಾರೆ. ಆದರೆ ಕಸ್ಟಮ್ಸ್ ಡ್ರಗ್ಸ್ ವಾಸನೆ ತರಬೇತಿ ನಾಯಿ ಮದ್ಯದ ಬಾಟಲಿಗಳಿದ್ದ ಕವರ್ ಬಳಿ ಬಂದು ಕುಳಿತಿತ್ತು. ಅನುಮಾನ ಬಂದು ಪರಿಶೀಲಿಸಿದ್ದಕ್ಕೆ ಮದ್ಯದ ಬಾಟಲಿಗಳಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!