Friday, June 2, 2023

Latest Posts

Stop food waste | ತಟ್ಟೆ ತುಂಬಾ ಹಾಕಿಕೊಂಡು, ಅರ್ಧ ತಿಂದು ಬಿಡ್ತೀರಾ? ಊಟ ವೇಸ್ಟ್ ಮಾಡೊ ನೀವು ಇದನ್ನು ಓದಲೇಬೇಕು…

ಹಸಿವಾದಾಗ ಕಣ್ಣೆದುರು ಇರೋಒದನ್ನೆಲ್ಲಾ ತಿಂದು ಬಿಡಬೇಕು ಎನಿಸುತ್ತದೆ, ತಿಂತಿವೋ ಬಿಡ್ತೀವೋ ತಟ್ಟೆ ತುಂಬಾ ಹಾಕಿಕೊಳ್ಳೋದಂತೂ ಸುಳ್ಳಲ್ಲ. ಆಮೇಲೆ ನಾಲ್ಕು ತುತ್ತು ತಿಂತಿದ್ದಂತೆ ಹೊಟ್ಟೆ ತುಂಬಿ ಹೋಗುತ್ತದೆ. ಆಮೇಲೆ ಏನೂ ತಿನ್ನದೆ ವೇಸ್ಟ್ ಮಾಡಿಬಿಡುತ್ತೇವೆ, ಇನ್ನು ಮನೆಯಲ್ಲೂ ಸಾಕಷ್ಟು ಫುಡ್ ವೇಸ್ಟ್ ಆಗುತ್ತದೆ. ಇದನ್ನು ತಡೆಯೋದು ಹೇಗೆ ನೋಡಿ..

  • ಮದುವೆ ಮನೆ, ಕಾರ್ಯಕ್ರಮ ಎಲ್ಲೇ ಹೋಗಿ ತಿನ್ನುವಷ್ಟು ಪದಾರ್ಥ ಮಾತ್ರ ಹಾಕಿಸಿಕೊಳ್ಳಿ, ಎಲೆಯಲ್ಲಿ ಹಾಕಿ ಬಿಡಬೇಡಿ.
  • ಮನೆಯಲ್ಲಿ ಅಡುಗೆ ಮಾಡುವಾಗ ಲಿಮಿಟ್ ಇರಲಿ, ಸ್ವಲ್ಪ ಊಟ ಕಡಿಮೆಯಾದರೂ ಹಾಲು, ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು ಆದರೆ ಉಳಿದರೆ ಮತ್ಯಾರೂ ತಿನ್ನೋದಿಲ್ಲ.
  • ಒಂದೇ ಬಾರಿ ಮನೆಯಲ್ಲಿ ಫ್ರಿಡ್ಜ್ ತುಂಬಾ ತರಕಾರಿ, ಹಣ್ಣು ತಂದಿಡೋ ಬದಲು, ಖಾಲಿ ಆದಂತೆ ಹೋಗಿ ತನ್ನಿ.
  • ರಾತ್ರಿ ಊಟ ಅನ್ನ, ಚಪಾತಿ ಹಿಟ್ಟು ಉಳಿದರೆ ಅದನ್ನು ಮರುಬಳಕೆ ಮಾಡುವ ಸಾಕಷ್ಟು ರೆಸಪಿಗಳಿವೆ ಅದನ್ನು ಟ್ರೈ ಮಾಡಿ.
  • ಊಟ ಹೆಚ್ಚಾಗಿದ್ದರೆ, ಉಳಿದಿದ್ದರೆ ಅದನ್ನು ಯಾರಿಗಾದರೂ ನೀಡಿ, ಎಸೆಯುವ ಬದಲು ಬೇಕಾದವರಿಗೆ ಆಹಾರ ಕೊಡಿ.
  • ಹಣ್ಣುಗಳನ್ನು ಹೇಗೆ ಇಟ್ಟರೆ ಕೊಳೆತು ಹೋಗೋದಿಲ್ಲ, ಅಕ್ಕಿ ಹೇಗೆ ಇಟ್ಟರೆ ಹುಳ ಬರೋದಿಲ್ಲ, ಹೀಗೆ ಸ್ಟೋರೇಜ್ ಸರಿಯಾಗಿರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!