G-20 ಶೃಂಗಸಭೆ: ರಾಷ್ಟ್ರಪತಿಗಳ ಔತಣಕೂಟದಲ್ಲಿ ಭಾರತೀಯ ಖಾದ್ಯಗಳ ಕರಾಮತ್ತು, ಬೆಳ್ಳಿ ಪಾತ್ರೆಗಳಲ್ಲಿ ಸರ್ವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ20 ಶೃಂಗಸಭೆಯ ಸಂದರ್ಭದಲ್ಲಿ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಇತರ ಪ್ರತಿನಿಧಿಗಳಿಗೆ ಶನಿವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ವಿಶೇಷ ಭಕ್ಷ್ಯಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಔತಟಣಕೂಟದಲ್ಲಿ ಭಾರತೀಯ ವಿಶೇಷ ಖಾದ್ಯಗಳ ವಿದೇಶಿ ನಾಯಕರ ಮನಸೆಳೆಯಲಿದೆ. ಐಷಾರಾಮಿ ಹೋಟೆಲ್ ಗುಂಪಿನ ಹಿರಿಯ ವ್ಯವಸ್ಥಾಪಕರು, ಸಿಬ್ಬಂದಿ ಎರಡು ದಿನಗಳ ಸಮ್ಮೇಳನಕ್ಕಾಗಿ ಭಾರತ ಮಂಟಪದಲ್ಲಿ ಭೋಜನದ ವ್ಯವಸ್ಥೆ ಮಾಡುವಲ್ಲಿ ನಿರತರಾಗಿದ್ದಾರೆ. ಈ ಸಂದರ್ಭ ವಿಶೇಷವಾಗಿ ಸಿದ್ಧಪಡಿಸಿದ ಪಾತ್ರೆಗಳಲ್ಲಿ ಭೋಜನದ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ಪಿಟಿಐ ವರದಿ ಮಾಡಿದೆ.

ಜಿ 20 ಔತಣಕೂಟದಲ್ಲಿ ಗುಲಾಬ್ ಜಾಮೂನ್, ರಸ್ಮಲೈ ಮತ್ತು ಜಿಲೇಬಿಯಂತಹ ಸಿಹಿತಿಂಡಿಗಳನ್ನು ಸೇರಿಸಲಾಗಿದೆ ಎಂಬುದರ ಮಾಹಿತಿಯಿದೆ. ಈ ಔತಣಕ್ಕಾಗಿ ಏರ್ಪಡಿಸಲಾದ ಆಹಾರದ ಪಟ್ಟಿಯು ಭಾರತದಲ್ಲಿ ಮಾನ್ಸೂನ್ ಸಮಯದಲ್ಲಿ ಸವಿಯುವ ಖಾದ್ಯಗಳನ್ನೂ ಒಳಗೊಂಡಿದೆ. ವಿಶೇಷವಾಗಿ ತಯಾರಿಸಿದ ಬೆಳ್ಳಿಯ ಪಾತ್ರೆಗಳಲ್ಲಿ ಆಹಾರವನ್ನು ನೀಡಲಾಗುವುದು. ಈ ಸಭೆಗಾಗಿ 200 ಕುಶಲಕರ್ಮಿಗಳಿಂದ ಸುಮಾರು 15,000 ಬೆಳ್ಳಿಯ ಪಾತ್ರೆಗಳನ್ನು ಸಿದ್ಧಪಡಿಸಲಾಯಿತು.

ಮೆನುವಿನಲ್ಲಿ ಯಾವ ರೀತಿ ಖಾದ್ಯಗಳಿವೆ ಎಂಬುದನ್ನು ಅಧಿಕಾರಿಗಳು ನಿಖರವಾದ ವಿವರಗಳನ್ನು ನೀಡಿಲ್ಲ. ಆಧರೆ ಮಿಲ್ಲೆಟ್ಸ್‌ ಸಂಬಂಧಿಸಿದ ಆಹಾರಗಳೂ ಇರಲಿವೆ ಎಂದು ತಿಳಿದುಬಂದಿದೆ. ಮೆನು ವಿವರರಗಳನ್ನು ಬಹಿರಂಗಪಡಿಸಿಲ್ಲವಾದರೂ..ಭಾರತೀಯ ಅಡುಗೆಯ ರುಚಿ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಭಕ್ಷ್ಯಗಳನ್ನು ಬಡಿಸುವ ಸಿಬ್ಬಂದಿ ಕೂಡ ವಿಶೇಷ ಬಟ್ಟೆಗಳನ್ನು ಧರಿಸುತ್ತಾರೆ.

ಜೈಪುರ ಮೂಲದ ಲೋಹದ ಪಾತ್ರೆ ತಯಾರಕರ ಮಾತಿನಂತೆ..ಮಂಗಳವಾರ ಹಲವಾರು ಐಷಾರಾಮಿ ಹೋಟೆಲ್‌ಗಳು ತಮ್ಮಲ್ಲಿ ಉಳಿದುಕೊಳ್ಳುವ ವಿದೇಶಿ ಪ್ರತಿನಿಧಿಗಳಿಗಾಗಿ ಬೆಳ್ಳಿಯ ಪಾತ್ರೆಗಳನ್ನು ಆರ್ಡರ್‌ ಕೊಟ್ಟು ಮಾಡಿಸಿಕೊಂಡಿದ್ದಾರೆಂದು ಹೇಳಿದರು. ಕಂಪನಿಯು ಮಂಗಳವಾರ ಮಾಧ್ಯಮಗಳಿಗೆ ಕೆಲವು ಬೆಳ್ಳಿಯ ವಸ್ತುಗಳನ್ನು ತೋರಿಸಿತ್ತು. 200 ಜನರು ಕುಶಲಕರ್ಮಿಗಳು ಶೃಂಗಸಭೆಗಾಗಿ ಸುಮಾರು 15,000 ಬೆಳ್ಳಿಯ ಪಾತ್ರೆಗಳನ್ನು ಸಿದ್ಧಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!