ಪ್ರಮುಖ ನಗರಗಳಲ್ಲಿ ಹೊಸ ವರ್ಷಾಚರಣೆ ಭಾರೀ ಜೋರು: ಬೆಂಗಳೂರಿನಲ್ಲಿ ಲಾಠಿ ಚಾರ್ಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಾದ್ಯಂತದ ಇತರ ದೊಡ್ಡ ನಗರಗಳು 2023 ಅನ್ನು ಬೃಹತ್ ಆಚರಣೆಗಳ ನಡುವೆ ಸ್ವಾಗತಿಸಿದವು. ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾ, ಚನ್ನೈ, ಹೈದರಾಬಾದ್‌ ಮೋಜು-ಮಸ್ತಿಯಲ್ಲಿ ಮುಳುಗಿದ್ದವು. ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವುದು ಸುಮಾರು ಎರಡು ವರ್ಷಗಳಲ್ಲಿ ಇದೇ ಮೊದಲು. ಹೊಸ ವರ್ಷಾಚರಣೆಗೆ ಅವಕಾಶ ನೀಡಿದ್ದರಿಂದ ಎಲ್ಲಾ ನಗರಗಳಲ್ಲೂ ಜನ ಭಾರೀ ಸಂಖ್ಯೆಯಲ್ಲಿ ಸೇರಿ ಹೊಸ ವರ್ಷವನ್ನು ಸ್ವಾಗಿತಿಸಿದ್ದಾರೆ.

ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.  ರೆಸ್ಟೋರೆಂಟ್‌ಗಳು, ಪಬ್‌ಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಆಚರಣೆಗಳನ್ನು ಆಯೋಜಿಸಲು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಅನುಮತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಅದರಂತೆಯೇ ಒದು ಗಂಟೆ ನಂತರವೂ ಭಾರೀ ಜನಸಂಖ್ಯೆಯಿದ್ದ ಕಾರಣ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

ದೆಹಲಿಯು ಐಕಾನಿಕ್ ಇಂಡಿಯಾ ಗೇಟ್‌ನಲ್ಲಿ ಜನಸಂದಣಿಯ ಬೃಹತ್ ಸಭೆಗೆ ಸಾಕ್ಷಿಯಾಯಿತು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ನಗರದಾದ್ಯಂತ ಸುಮಾರು 18,000 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಮುಂಬೈ ಇತರ ಜನಪ್ರಿಯ ತಾಣಗಳ ನಡುವೆ ಮರೈನ್ ಡ್ರೈವ್‌ನಲ್ಲಿ ಜನರು ಎಂಜಾಯ್‌ಮೆಂಟ್ ಕಂಡಿತು. ಉತ್ತರಾಖಂಡದ ಮಸ್ಸೂರಿಯ ಬೀದಿಗಳು ಮತ್ತು ಮನಾಲಿಯ ಮಾಲ್ ರೋಡ್ ಕೂಡ ತಡರಾತ್ರಿಯವರೆಗೂ ಹೊಸ ವರ್ಷಾಚರಣೆಗೆ ಜನರಿಂದ ತುಂಬಿ ತುಳುಕುತ್ತಿತ್ತು.

ನಿರೀಕ್ಷೆಯಂತೆ ಗೋವಾದಲ್ಲಿ ಭಾರೀ ಜನಸಂದಣಿ ಈದೆ. ವೀಕೆಂಡ್‌ ಜೊತೆ ಹೊಸ ವರ್ಷ ಆಚರಿಸಲು ಜನ ತಂಡೋಪತಂಡವಾಗಿ ಆಗಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!