ಹೊಸ ವರ್ಷಾಚರಣೆ ಹಿನ್ನೆಲೆ: ದೇಶದ ಪ್ರಮುಖ ದೇವಾಲಯಗಳಲ್ಲಿ ಆರತಿ, ಪೂಜಾಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022ಕ್ಕೆ ವಿದಾಯ ಹೇಳಿ 2023ರನ್ನು ಸ್ವಾಗತಿಸಿದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ದೇವಾಲಯಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಪೂಜಾಕೈಂಕರ್ಯಗಳು ಶುರುವಾಗಿವೆ.

ಉತ್ತರ ಪ್ರದೇಶದ ವಾರಣಾಸಿಯ ಅಸ್ಸಿ ಘಾಟ್‌ನಲ್ಲಿ ಗಂಗಾ ಆರತಿ ನಡೆದಿದ್ದು, ಸಾವಿರಾರು ಮಂದಿ ಭಕ್ತಿ ಭಾವಗಳಿಂದ ಮಧುರ ಕ್ಷಣವನ್ನು ಕಣ್ತುಂಬಿಕೊಂಡರು.

ಹೊಸ ವರ್ಷದ 2023 ರ ಮುಂಜಾನೆ ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆರತಿ, ವಿಶೇಷ ಪೂಜೆ ನೆರೆವೇರಿದೆ

ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಮುಂಜಾನೆ ಭಸ್ಮ ಆರತಿ ನೆರವೇರಿದೆ. ಮಂತ್ರ-ಘೋಷಗಳಿಂದ ದೇವರಿಗೆ ವಿಶೇಷ ಪೀಜೆ ಸಲ್ಲಿಸಲಾಯಿತು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!