ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕಲಿ ಭಾರತೀಯ ವೀಸಾಗಳನ್ನು ತಯಾರಿಸಿ ವೀಸಾ ಅವಧಿ ಮುಗಿದ ಆಫ್ರಿಕನ್ನರಿಗೆ ಒದಗಿಸುತ್ತಿದ್ದ ಇಬ್ಬರು ಆಫ್ರಿಕನ್ ಪ್ರಜೆಗಳನ್ನು ದೆಹಲಿ ಕ್ರೈಂ ಬ್ರಾಂಚ್ ಪೋಲೀಸರು ಬಂಧಿಸಿದ್ದಾರೆ. ಅವರು ವೀಸಾಗಳನ್ನು ತಲಾ 4,000-5,000 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳನ್ನು ರಿಪಬ್ಲಿಕ್ ಆಫ್ ಘಾನಾ ನಿವಾಸಿ 33 ವರ್ಷದ ಒರ್ಟೆಗಾ ಲಿಯೊನಾರ್ಡ್ ಮತ್ತು ರಿಪಬ್ಲಿಕ್ ಆಫ್ ಕೋಟ್ ಡಿ ಐವರಿ ನಿವಾಸಿ 32 ವರ್ಷದ ಡಿಯೊಮಾಂಡೆ ಎಂದು ಗುರುತಿಸಲಾಗಿದೆ. ಈ ಹಿಂದೆಯೂ ಕೂಡ ಕೆಲ ಆಫ್ರಿಕನ್ ಪ್ರಜೆಗಳು ಅಕ್ರಮ ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು ಈ ಹಿನ್ನೆಲಯಲ್ಲಿ ಕ್ರೈಂ ಬ್ರಾಂಚ್ ಪೋಲೀಸರು ಆಫ್ರಿಕನ್ ದೇಶಗಳ ಜನರು ವಾಸಿಸುವ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ನಡೆಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ, ಚಂದರ್ ವಿಹಾರ್‌ನಲ್ಲಿ ನೆಲೆಸಿರುವ ಇಬ್ಬರು ಆಫ್ರಿಕನ್ ಪ್ರಜೆಗಳು ತಮ್ಮ ವೀಸಾ ಅವಧಿ ಮುಗಿದಿರುವ ಮತ್ತು ಮಾನ್ಯ ದಾಖಲೆಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಆಫ್ರಿಕನ್ ಪ್ರಜೆಗಳಿಗೆ ನಕಲಿ ವೀಸಾಗಳನ್ನು ತಯಾರಿಸುತ್ತಿದ್ದಾರೆ ಪೋಲೀಸರಿಗೆ ಗೌಪ್ಯ ಮಾಹಿತಿ ಸಿಕ್ಕಿತ್ತು. ಅದರಂತೆ ಶಂಕಿತ ವಿಳಾಸದ ಮೇಲೆ ದಾಳಿ ನಡೆಸಲು ತಂಡವನ್ನು ರಚಿಸಿ ಪೋಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.