Wednesday, July 6, 2022

Latest Posts

ದೆಹಲಿಯಲ್ಲಿ ಮತ್ತೆ ಆಗುತ್ತಾ ಲಾಕ್​ಡೌನ್​: ಸಿಎಂ ಕೇಜ್ರಿವಾಲ್​ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಜೊತೆ ಒಮಿಕ್ರಾನ್ ಸೋಂಕಿನ ಪ್ರಮಾಣ ದೇಶದಲ್ಲಿ ಏರಿಕೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲೂ ಅಬ್ಬರ ಜೋರಾಗಿದೆ.
ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ
ದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಲಾಕ್​ಡೌನ್​ ಹೇರಿಕೆ ಮಾಡಲ್ಲ . ಸಾವು ಮೂರನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ ಕೇಜ್ರಿವಾಲ್​ ಹೇಳಿದ್ದಾರೆ.
ದೆಹಲಿಯಲ್ಲಿ ಪ್ರತಿದಿನ 20-22 ಸಾವಿರದಷ್ಟು ಪ್ರಕರಣಗಳು ದಾಖಲಾಗುತ್ತಿದ್ದು, ನಿಯಂತ್ರಣಕ್ಕೆ ನೈಟ್​ ಕರ್ಫ್ಯೂ ಸೇರಿದಂತೆ ಇತರೆ ಮಾರ್ಗಸೂಚಿ ಜಾರಿ ಮಾಡಲಾಗಿದೆ. ಹೀಗಾಗಿಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡಲ್ಲ ಎಂದರು.
ರಾಜ್ಯದಲ್ಲಿ ಅರೋಗ್ಯ ಇಲಾಖೆ ಮೂರನೇ ಅಲೆ ಕೋವಿಡ್ ತಡೆಗಟ್ಟಲು ಎಲ್ಲ ರೀತಿಯಿಂದಲೂ ಸಜ್ಜುಗೊಂಡಿದ್ದು, ಅಗತ್ಯಬಿದ್ದರೆ ಹೆಚ್ಚಿನ ಬೆಡ್​ಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ದೆಹಲಿಯಲ್ಲಿ ಸದ್ಯ ಪಾಸಿಟಿವಿಟಿ ದರ ಶೇ. 24ರಷ್ಟಿದೆ. ಮುಂದೆ ಏನಾಗುತ್ತದೆ ಎಂದು ಕಾದುನೋಡೋಣ. ಸದ್ಯ ಜನರ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಲು ನಮಗೆ ಇಷ್ಟವಿಲ್ಲ ಎಂದು ಹೇಳಿದರು.
ಇನ್ನು ಕೊರೋನಾ ಪಾಸಿಟಿವ್ ಬಂದು ಹೋಂ ಕ್ವಾರಂಟೈನ್​​ಗೊಳಗಾಗುವ ಜನರಿಗೆ ಆನ್​ಲೈನ್ ಯೋಗ ತರಗತಿ ಪ್ರಾರಂಭಿಸಲಾಗುವುದು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಅದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss