ಗಣರಾಜ್ಯೋತ್ಸವ ಪರೇಡ್‌ಗೆ ಮತ್ತೆ ದೆಹಲಿ ಟ್ಯಾಬ್ಲೋ ತಿರಸ್ಕಾರ, ಆಪ್‌- ಬಿಜೆಪಿ ನಡುವೆ ಸಂಘರ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಪಥದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ದೆಹಲಿಯ ಟ್ಯಾಬ್ಲೋ ಇರುವುದಿಲ್ಲ. ನಾಲ್ಕನೇ ಬಾರಿ ಈ ರೀತಿ ದೆಹಲಿಯ ಟ್ಯಾಬ್ಲೋ ತಿರಸ್ಕಾರಗೊಂಡಿದ್ದು, ಆಪ್‌  ಹಾಗೂ ಬಿಜೆಪಿ ನಡುವೆ ಮತ್ತೆ ಸಂಘರ್ಷಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌, ಕಳೆದ ಕೆಲವು ವರ್ಷಗಳಿಂದ ದೆಹಲಿಯ ಟ್ಯಾಬ್ಲೋಗೆ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದು ಯಾವ ರೀತಿಯ ರಾಜಕೀಯ? ಬಿಜೆಪಿಯವರು ದೆಹಲಿಯ ಜನರನ್ನು ಏಕೆ ದ್ವೇಷಿಸುತ್ತಾರೆ? ದೆಹಲಿಯ ಜನರು ಅವರಿಗೆ ಏಕೆ ಮತ ಹಾಕಬೇಕು? ಎಂದು ಕಿಡಿಕಾರಿದ್ದಾರೆ.

ಬಿಜೆಪಿಗೆ ದೆಹಲಿಯ ಜನರ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ. ಅವರು ಸುಮ್ಮನೆ ಕೇಜ್ರಿವಾಲ್‌ರನ್ನು ನಿಂದಿಸುತ್ತಾರೆ. ಇದಕ್ಕಾಗಿ ನಾವು ಅವರಿಗೆ ಮತ ಹಾಕಬೇಕೇ? ಜನವರಿ 26 ರ ಪರೇಡ್‌ನಲ್ಲಿ ಭಾಗವಹಿಸದಂತೆ ಟ್ಯಾಬ್ಲೋ ಮತ್ತು ದೆಹಲಿಯ ಜನರನ್ನು ಏಕೆ ತಡೆಯಲಾಗುತ್ತಿದೆ? ಎಂದು ಅವರು ಪ್ರಶ್ನಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!