ಏಪ್ರಿಲ್‌ನಲ್ಲಿ ದೆಹಲಿ to ತಿರುವನಂತಪುರ: 52 ವರ್ಷಗಳ ರಾಜಕೀಯ ವೃತ್ತಿ ಬದುಕಿಗೆ ವಿದಾಯ ಹೇಳಿದ ಎಕೆ ಆಂಟನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

52 ವರ್ಷಗಳ ರಾಜಕೀಯ ವೃತ್ತಿ ಬದುಕಿಗೆ ವಿದಾಯ ಹೇಳಲು ,ಕಾಂಗ್ರೆಸ್ ಹಿರಿಯ ನಾಯಕ, ಕೇರಳದ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಎಕೆ ಆಂಟನಿ ನಿರ್ಧರಿಸಿದ್ದಾರೆ.
ಈ ಕುರಿತು ತಿರುವನಂತಪುರಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರಾಜಕೀಯ ಮತ್ತು ನನ್ನ ಸಂಸದೀಯ ವೃತ್ತಿಜೀವನದಲ್ಲಿ ನನ್ನ ಪ್ರಯಾಣವನ್ನು ಕೊನೆಗೊಳಿಸುವ ಸಮಯ ಬಂದಿದೆ. ನಾನು ಏಪ್ರಿಲ್‌ನಲ್ಲಿ ದೆಹಲಿಯಿಂದ ಹೊರಟು ತಿರುವನಂತಪುರದಲ್ಲಿ ವಾಸಕ್ಕೆ ಮರಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ವಿದಾಯವನ್ನು ಘೋಷಿಸಿದ್ದಾರೆ.
ಈಗಾಗಲೇ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಕ್ಕೆ ಮರು ಆಯ್ಕೆ ಬಯಸುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ತಿಳಿಸಿದೆ. ಮಾರ್ಚ್ 31ರಂದು ಕೇರಳದ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
81ವರ್ಷ ಎಕೆ ಅಂಟನಿ ಅವರು ತಮಗೆ ಇದುವರೆವಿಗೂ ಸೂಕ್ತ ಹುದ್ದೆ ನೀಡಿ, ರಾಜ್ಯಸಭಾ ಸದಸ್ಯನಾಗಲು ಅವಕಾಶ ನೀಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಿದರು.
‘ಚುನಾವಣಾ ರಾಜಕೀಯ ಮತ್ತು ನನ್ನ ಸಂಸದೀಯ ವೃತ್ತಿಜೀವನದಲ್ಲಿ ನನ್ನ ಪ್ರಯಾಣವನ್ನು ಕೊನೆಗೊಳಿಸುವ ಸಮಯ ಇದೀಗ ಬಂದಿದೆ. ನಾನು ಏಪ್ರಿಲ್‌ನಲ್ಲಿ ದೆಹಲಿಯಿಂದ ಹೊರಟು ತಿರುವನಂತಪುರದಲ್ಲಿ ವಾಸಕ್ಕೆ ಮರಳುತ್ತೇನೆ’ ಎಂದು ಹೇಳಿದರು.

1970 ರ ದಶಕದಲ್ಲಿ ಕೇರಳ ರಾಜಕೀಯದಲ್ಲಿ ಪ್ರಾರಂಭವಾದ ಅವರ ವೃತ್ತಿಜೀವನ, ಕಾಂಗ್ರೆಸ್‌ನ ಅತ್ಯಂತ ಪ್ರಾಮಾಣಿಕ ಮತ್ತು ನೇರ ನಾಯಕರಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಹೊಂದಿದ್ದರು ಮತ್ತು ಅವರಿಗೆ ‘ಕಾಂಗ್ರೆಸ್‌ನ ಸಂತ(St) ಆಂಟನಿ’ ಎಂಬ ಗೌರವದಿಂದ ಕರೆಯಲಾಗುತ್ತದೆ.
ಸೋನಿಯಾ ಗಾಂಧಿಯವರ ವಿಶ್ವಾಸಾರ್ಹ ಗುಂಪಿನ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ಅವರು, ಇಂದಿರಾ ಮತ್ತು ರಾಜೀವ್ ಗಾಂಧಿಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಕಟ್ಟಾ ಕಾಂಗ್ರೆಸ್ ಪಟು.

ಆಂಟನಿ 1970 ರಲ್ಲಿ ಕೇರಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಶಾಸಕರಾದರು ಮತ್ತು 1977 ರಲ್ಲಿ 37 ನೇ ವಯಸ್ಸಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅವರ ಮೂರು ಅವಧಿಗಳಲ್ಲಿ ಮೊದಲ ಬಾರಿಗೆ ಕರ್ತವ್ಯ ನಿರ್ವಹಿಸಿದರು. ಐದು ಅವಧಿಗಳ ಕಾಲ ಶಾಸಕರಾಗಿದ್ದರು ಜೊತೆಗೆ , ಅವರು 10 ವರ್ಷಗಳ ಕಾಲ ಕಾಂಗ್ರೆಸ್‌ನ ಕೇರಳ ಘಟಕದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಮೂರು ಅವಧಿಗೆ ಕೇಂದ್ರ ಸಚಿವರಾದರು – 2006 ರಿಂದ 2014 ರವರೆಗೆ ದೇಶದ ಯಾವುದೇ ರಕ್ಷಣಾ ಸಚಿವರ ಸುದೀರ್ಘ ಅವಧಿ ಸೇರಿದಂತೆ – ಅವರು ಐದು ಅವಧಿಗೆ ರಾಜ್ಯಸಭಾ ಸಂಸದರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!