ʻಕಳಪೆʼ ವರ್ಗಕ್ಕಿಳಿದ ದೆಹಲಿ ವಾಯು ಗುಣಮಟ್ಟ: ಎಕ್ಯೂಐನಲ್ಲಿ 256ರಷ್ಟು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುರುವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ‘ಕಳಪೆ’ ವಿಭಾಗದಲ್ಲಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI)ದಲ್ಲಿ 256ರಷ್ಟು ದಾಖಲಾಗಿದೆ.

ಮಾಲಿನ್ಯವನ್ನು ತಗ್ಗಿಸಲು, ಆನಂದ್ ವಿಹಾರ್ ಪ್ರದೇಶದಲ್ಲಿ ಆಂಟಿ-ಸ್ಮಾಗ್ ಗನ್ ಮೂಲಕ ನೀರನ್ನು ಚಿಮುಕಿಸಲಾಯಿತು. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಮಾಹಿತಿಯ ಪ್ರಕಾರ, ದೆಹಲಿಯ ಗಾಳಿಯ ಗುಣಮಟ್ಟವು ‘ಕಳಪೆ’ ವರ್ಗದಲ್ಲಿದೆ ಎಂದು ತಿಳಿಸಿದೆ.

ಈ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು, ಮಾಲಿನ್ಯ ವಿರೋಧಿ ಅಭಿಯಾನವೂ ಇಂದು ಪ್ರಾರಂಭವಾಗಲಿದೆ. ʻಮಾಲಿನ್ಯದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಕಳೆದ ಕೆಲವು ದಿನಗಳಿಂದ ಕೆಮ್ಮು ಮತ್ತು ಗಂಟಲು ಉರಿಯುತ್ತಿದೆ, ಇದು ಪ್ರತಿ ವರ್ಷದಂತೆ ಯಾವುದೇ ಪರಿಹಾರವಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದ್ದು, ಸಾಕಷ್ಟು ಟ್ರಾಫಿಕ್ ಇದೆʼ ಎಂದು ದೆಹಲಿ ಜನ ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಹುಲ್ಲು ಸುಡುವಿಕೆಯು ಮುಂದುವರಿದಿರುವುದರಿಂದ, ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವು ಕಳೆದ ಕೆಲವು ದಿನಗಳಿಂದ ಹದಗೆಟ್ಟಿದೆ. ಅಂಕಿಅಂಶಗಳ ಪ್ರಕಾರ, ಈ ವರ್ಷ ಇದುವರೆಗೆ 2,500 ಕ್ಕೂ ಹೆಚ್ಚು ಹುಲ್ಲು ಸುಡುವ ಪ್ರಕರಣಗಳು ವರದಿಯಾಗಿವೆ. ಆದರೂ ಕೃಷಿಗೆ ಬೆಂಕಿ ಇಡುವ ಪ್ರಕರಣಗಳು ಹಿಂದಿನ ಎರಡು ವರ್ಷಗಳಿಗಿಂತ ಉತ್ತಮವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!