Sunday, December 10, 2023

Latest Posts

ಹೃದ್ರೋಗದ ಅಪಾಯ ಎದುರಿಸುತ್ತಿದ್ದಾರೆ ಬಿಎಂಟಿಸಿಯ ಶೇ.50ರಷ್ಟು ಚಾಲಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶೇ.40-50 ರಷ್ಟು ಚಾಲಕರು ಹೃದಯ ಸಂಬಂಧಿ ಕಾಯಿಲೆಗಳ ಅಪಾಯದಲ್ಲಿ ಸಿಲುಕಿದ್ದಾರೆ.

ಬಿಎಂಟಿಸಿಯ ಶೇ.40-50 ರಷ್ಟು ಚಾಲಕರಿಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆ ಇದೆ. ಈ ಬಗ್ಗೆ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಮಾತನಾಡಿದ್ದು, ಕಳೆದ ಒಂದು ವರ್ಷದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಒಟ್ಟಾರೆ ಎಂಟು ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಚಾಲಕರಿಗೆ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಮಾಡಲಾಗಿದೆ.

ಎಲ್ಲಾ ಚಾಲಕರಿಗೂ ರಕ್ತ ಪರೀಕ್ಷೆ, ಹೃದಯದ ಒತ್ತಡ ಪರೀಕ್ಷೆ, ಇಡಿಜಿ ಹಾಗೂ ಎಕೋಕಾರ್ಡಿಯಾಗ್ರಾಮ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಶೇ. 40ರಷ್ಟು ಚಾಲಕರಿಗೆ ಮಧುಮೇಹ ಸಮಸ್ಯೆ, ಶೇ,62 ರಷ್ಟು ಜನರಿಗೆ ಅಧಿಕ ರಕ್ತದೊತ್ತಡ ಹಾಗೂ ಶೇ.5ರಷ್ಟು ಜನರು ಈಗಾಗಲೇ ಹೃದಯ ಸಂಬಂಧಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಶೇ.35 ರಷ್ಟು ಮಂದಿಗೆ ಧೂಮಪಾನದ ಅಭ್ಯಾಸ ಇದೆ. ಚಾಲಕರ ಊಟದ ಅಭ್ಯಾಸ, ನಿದ್ದೆಯ ಅಭ್ಯಾಸದಲ್ಲಿ ಸದಾ ಬದಲಾವಣೆಗಳಿರುತ್ತದೆ, ಅನಿಯಮಿತ ಕೆಲಸದ ಸಮಯ, ಅಸಮರ್ಪಕ ಆಹಾರ ಸೇವನೆ, ವ್ಯಾಯಾಮದ ಕೊರತೆ, ಬಸ್ ಓಡಿಸುವಾಗ ಗಂಟೆಗಟ್ಟಲೆ ಕುಳಿತಲ್ಲೇ ಕೂರುವುದು ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

ಆಗಸ್ಟ್ 2022ರಲ್ಲಿ ಬಿಎಂಟಿಸಿ ಜೊತೆ ಆಸ್ಪತ್ರೆ ಒಪ್ಪಂದ ಮಾಡಿಕೊಂಡಿದ್ದು, ಚಾಲಕರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!