ಸ್ವಿಗ್ಗಿ ಹೊಸವೇತನ ರಚನೆ ವಿರುದ್ಧ ಬೀದಿಗಳಿದ ಡೆಲಿವರಿ ಏಜೆಂಟ್ಸ್:‌ ಚೆನ್ನೈನಲ್ಲಿ ಎದರುರಾಗಿದೆ ಫುಡ್ ಡೆಲಿವರಿ ಸಮಸ್ಯೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಷನ್‌ ಸ್ವಿಗ್ಗಿಯು ಹೊಸ ವೇತನ ರಚನೆಯನ್ನು ಪರಿಚಯಿಸಿದ್ದು, ಇದನ್ನು ವಿರೋಧಿಸಿ ನೂರಾರು ಡೆಲಿವರಿ ಏಜೆಂಟರು ಚೆನ್ನೈನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದರಿಂದಾಗಿ ಚೆನ್ನೈನಲ್ಲಿ ಫುಡ್‌ ಡೆಲಿವರಿ ಸಮಸ್ಯೆ ಎದರುರಾಗಿದ್ದು ಕೆಲವುಕಡೆ ವಿತರಣೆಯ ಅಲಭ್ಯತೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ದೂರಿನ ಪೋಸ್ಟ್‌ ಗಳನ್ನು ಮಾಡಲಾಗುತ್ತಿದೆ. ಕೆಲವು ಪ್ರದೇಶಗಳಿಗೆ ಆರ್ಡರ್‌ಗಳನ್ನು ತಲುಪಿಸಲು 90 ನಿಮಿಷಗಳನ್ನು ತೆಗೆದುಕೊಂಡಿದೆ ಎಂದು ರೆಸ್ಟೋರೆಂಟ್‌ಗಳು ದೂರಿವೆ. ಇದಲ್ಲದೇ ಡೆಲಿವರಿ ಮಾಡುವವರಿಲ್ಲದೇ ಸ್ವಿಗ್ಗೀಯ ಇನ್ಸ್ಟಾಮಾರ್ಟ್‌ ಪುಟದಲ್ಲಿ ಅಂಗಡಿಯನ್ನು ಮುಚ್ಚಲಾಗಿದೆ ಎಂದು ಕ್ಷಮೆಯಾಚಿಸುವ ಸಂದೇಶ ಕಾಣಿಸಿಕೊಂಡಿದೆ.

ಸ್ವಿಗ್ಗಿ ಡೆಲಿವರಿ ಏಜೆಂಟ್‌ಗಳು ಕಂಪನಿಯು ಪರಿಚಯಿಸಿರುವ ಹೊಸ ವೇತನ ರಚನೆಯ ವಿರುದ್ಧ ಮುಷ್ಕರ ನಡೆಸಿದ್ದು, ಅದನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಮುಷ್ಕರದಲ್ಲಿರುವ ವಿತರಣಾ ಏಜೆಂಟ್‌ಗಳು ಇಂಧನ ಭತ್ಯೆಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಸ್ಥಿರ ಪಾವತಿ ರಚನೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ, ವಿತರಣೆಗಳ ಮೇಲಿನ ಪ್ರೋತ್ಸಾಹವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, 24 ಗಂಟೆಗಳನ್ನು ಐದು ಶಿಫ್ಟ್‌ಗಳಾಗಿ ವಿಂಗಡಿಸಲಾಗಿದೆ ಮತ್ತು ವಿತರಣಾ ಏಜೆಂಟ್‌ಗಳು ವಾರದಲ್ಲಿ ಕನಿಷ್ಠ ಎರಡು ಪಾಳಿಗಳಿಗೆ ಮತ್ತು ವಾರಾಂತ್ಯದಲ್ಲಿ ಮೂರು ಪಾಳಿಗಳಿಗೆ ಕೆಲಸ ಮಾಡಲು ಕೇಳಲಾಗುತ್ತಿದೆ ಎಂದು ಡೆಲಿವರಿ ಏಜೆಂಟರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!