ಹೊಸ ದಿಗಂತ ವರದಿ, ಬೀದರ್:
ಭೂ ಪರಿವರ್ತನೆ ಹಾಗೂ ಜಮೀನಿನಲ್ಲಿ ಬಡಾವಣೆ ನಿರ್ಮಿಸಲು ಪರವಾನಗಿ ನೀಡಲು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ ಚಿಮಕೋಡೆ ಹಾಗೂ ಪ್ರಾಧಿಕಾರದ ೫೦ ಲಕ್ಷಕ್ಕೆ ಬೇಡಿಕೆ ಇಟ್ಟು ಆಪ್ತನ ಮೂಲಕ ೧೦ಲಕ್ಷ ಬಡಾವಣೆ ಮಾಲಿಕ ಸತೀಶ್ ಕಾಶಿನಾಥ ನೌಬಾದೆ ಬಳಿ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ವಿಷಯ ಲೋಕಾಯುಕ್ತ ಪೊಲೀಸ ಡಿಎಸ್ಪಿ ಹಣಮಂತರಾಯ ತಿಳಿಸಿದ್ದಾರೆ.
ರಿಯಲ ಎಸ್ಟೇಟ್ ಉದ್ಯಮಿ ಸತೀಶ ನೌಬಾದೆ ನೀಡಿದ ದೂರಿನ ಮೆರೆಗೆ ಶುಕ್ರವಾರ ನಗರದ ಪ್ರತಾಪ ನಗರದ ಬಳಿಯ ಸಿದ್ದೇಶ್ವರ ದಾಲಮಿಲ್ ಎದುರು ಲಂಚದ ೧೦ಲಕ್ಷ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ನೋಟುಗಳ ತಪಾಸಣೆ ನಡೆಸಿದ ಸಂದರ್ಭದಲ್ಲಿ ಲಂಚದ ಹಣ ಎಂಬುದು ಗೊತ್ತಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ದಾಳಿಯ ವೇಳೆ ಬೀದರ್ ಲೋಕಾಯುಕ್ತ ಠಾಣೆ ಪಿಎಸ್ಐ ಸಂತೋಷ ರಾಠೋಡ, ಪಿಐ ಅರ್ಜುನಪ್ಪ ಪಾಟೀಲ್, ಪಿಐ ಅರ್ಜುನಪ್ಪ ಸೇರಿದಂತೆ ಸಿಬ್ಬಂದಿ ದಾಳಿ ನಡೆಸಿದರು.