October 15, 2026
Thursday, October 15, 2026
spot_img

ಶಕ್ತಿ ಯೋಜನೆ ಬಳಿಕ ಬಸ್‌ಗಳ ಬೇಡಿಕೆ ಹೆಚ್ಚಳ: 4,500 ಹೊಸ ಬಸ್‌ ಖರೀದಿಗೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಕ್ತಿ ಯೋಜನೆಯ ಬಳಿಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ 4,500 ಹೊಸ ಬಸ್‌ಗಳನ್ನು ಖರೀದಿಸಲು ಸಾರಿಗೆ ಸಚಿವ ಭೈರತಿ ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರತಿದಿನ 1.5ರಿಂದ 1.8 ಕೋಟಿ ಮಂದಿ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸಂಚರಿಸುತ್ತಿದ್ದು, ಹಲವೆಡೆ ಬಸ್‌ಗಳ ಕೊರತೆ ಎದುರಾಗುತ್ತಿದೆ. ಇದೇ ವೇಳೆ ಈ ವರ್ಷ ಸುಮಾರು 6,000 ಹಳೆಯ ಬಸ್‌ಗಳನ್ನು ಸೇವೆಯಿಂದ ಹೊರಗಿಡುವ ಯೋಜನೆಯೂ ಇದೆ ಎಂದಿದ್ದಾರೆ.

ಇದನ್ನೂ ಓದಿ:

ಹೊಸ ಖರೀದಿಯಲ್ಲಿ ಡೀಸೆಲ್ ಬಸ್‌ಗಳ ಜೊತೆಗೆ ಬಸ್‌ ಸೇವೆ ಇಲ್ಲದ ಗ್ರಾಮಗಳಿಗೆ 1,000 ಹೊಸ ಬಸ್‌ಗಳನ್ನು ಒದಗಿಸುವ ಯೋಜನೆಯೂ ಸೇರಿದೆ. ಈಗಾಗಲೇ ಮೊದಲ ಹಂತದಲ್ಲಿ 1,000 ಬಸ್‌ಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ.

Must Read