ಹೊಸದಿಗಂತ ವರದಿ ಧಾರವಾಡ:
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನಿಸಿದ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ, ಹತ್ತಾರು ದಲಿತ ಸಂಘಟನೆಗಳು ಗುರುವಾರ ಹುಬ್ಬಳ್ಳಿ-ಧಾರವಾಡ ಬಂದ್ ನಡೆಸಿದವು.
ಬಂದ್ ಹಿನ್ನಲೆ ಅವಳಿ ನಗರದ ಶಾಲಾ-ಕಾಲೇಜಿಗೆ ಅಘೋಷಿತ ರಜೆ ನೀಡಿದ್ದವು. ಕೆಎಸ್ಆರ್ ಟಿಸಿ ಸಾರಿಗೆ ಕೂಡ ಅಘೋಷಿತ ಸ್ಥಗಿತ ಪ್ರಯಾಣಿಕರನ್ನು ಪೇಚೇಗೆ ಸಿಲುಕಿಸಿತು.
ನಗರದ ಸುಭಾಷ ಮಾರ್ಕೆಟ್, ನೆಹರೂ ಮಾರ್ಕೆಟ್, ತರಕಾರಿ ಮಾರ್ಕೆಟ್, ಎಪಿಎಂಸಿ, ತರಕಾರಿ ಮಾರ್ಕೆಟ್, ಟೀಕಾರೆ ರಸ್ತೆಗಳ ಹಾಗೂ ಅಂಗಡಿ-ಮುಂಗಟ್ಟುಗಳು ಸ್ವಯಂ ಪ್ರೇರಿತ ವೈವಾಹಿಟು ಸ್ಥಗತಗೊಳಿಸಿ, ಬಂದ್ ಗೆ ಬೆಂಬಲಿಸಿದವು.
ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೀಳು ಮಟ್ಟದ ಭಾಷೆ ಬಳಸಿರುವ ಕೇಂದ್ರ ಸಚಿವ ಅಮಿತಾ ಶಾ ಅವರ ರಾಜೀನಾಮೆ ಪಡೆಯಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದರು.