ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರಸ್ವಾಮಿ ದೇಗುಲದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
X ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಪ್ರಧಾನ ಮಂತ್ರಿ ಕಾರ್ಯಾಲಯವು ಹೀಗೆ ಬರೆದಿದೆ, “ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದ ನೋವಾಗಿದೆ. ನನ್ನ ಆಲೋಚನೆಗಳು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡವರ ಜೊತೆಯಲ್ಲಿವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಎಪಿ ಸರ್ಕಾರವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
ತಿರುಪತಿಯ ದೇವಸ್ಥಾನದಲ್ಲಿ ದೇವಾಲಯದ ಗೇಟ್ ನಿಂದ ದೇವಸ್ಥಾನದೊಳಕ್ಕೆ ಹೋಗುವವರೆಗೂ ಮೂರು ನಾಲ್ಕು ಕಿ.ಮೀ.ವರೆಗೂ ನೂಕುನುಗ್ಗಲು ಒಬ್ಬರಮೇಲೊಬ್ಬರು ಬೀಳುತ್ತಾರೆ ಮಕ್ಕಳು ವಯಸ್ಸಾದವರು ಯಾರನ್ನೂ ನೋಡುವುದಿಲ್ಲ ನಿಯಂತ್ರಿಸಲು ಪೋಲೀಸ್ ವ್ಯವಸ್ಥೆ ಇರುವುದಿಲ್ಲ ದೇವಾಲಯಕ್ಕೆ ಎಂಟ್ರಿ ಆದಮೇಲೆ ಹೆಜ್ಜೆಹೆಜ್ಜೆಗೂ ಪೋಲೀಸ್ ಇರುತ್ತಾರೆ ಹೊರಗಡೆ ಕೂಡ ಅಲ್ಲಲ್ಲೇ ಪೋಲೀಸ್ ಕಾವಲು ಇದ್ದು ತಳ್ಳಿ ನುಗ್ಗಿ ಹೋಗುವವರಿಗೆ ಕಡಿವಾಣ ಹಾಕಬೇಕು ಧರ್ಮಸ್ಥಳದಲ್ಲಿ ಪ್ರತಿಯೊಬ್ಬರೂ ಸರತಿ ಸಾಲಿನಲ್ಲೇ ಹೋಗುತ್ತಾರೆ ಈಗ ಅಲ್ಲಿಯೂ ತಿರುಪತಿ ಮಾದರಿಯಲ್ಲೇ ದೇವಾಲಯಕ್ಕೆ ಹೋಗಲು ದಾರಿ ಮಾಡಿರುವುದರಿಂದ ಅಲ್ಲಿಯೂ ನೂಕುನುಗ್ಗಲು ಅಧ್ವಾನ ಉಂಟಾಗುತ್ತದೆ