ಪಠ್ಯಗಳ ಮೂಲಕ ಪ್ರಜಾಪ್ರಭುತ್ವ ಬಲಪಡಿಸಬೇಕು: ಪ್ರೋ.ಬಿ.ವಿ.ವಸಂತಕುಮಾರ್

ಹೊಸದಿಗಂತ ವರದಿ, ಕಲಬುರಗಿ:

ಜ್ಞಾನ-ಕ್ರಿಯೇ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ಪಠ್ಯಪುಸ್ತಕ ಗಳ ಮೂಲಕ ಈ ದೇಶದ ಪ್ರಜಾಪ್ರಭುತ್ವ ಬಲಪಡಿಸುವ ಕೆಲಸವಾಗಬೇಕೆಂದು ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು ಅಧ್ಯಕ್ಷರಾದ ಪ್ರೋ.ಬಿ.ವಿ.ವಸಂತಕುಮಾರ್ ಹೇಳಿದರು.

ಅವರು ಭಾನುವಾರ ವಿವೇಕ ವೇದಿಕೆ ಕಲಬುರಗಿ ವತಿಯಿಂದ ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಸತ್ಯ-ಮಿಥ್ಯ ವಿಷಯದ ಹಿನ್ನೆಲೆಯಲ್ಲಿ ನಗರದ ಶ್ರೀ ಪೂಜ್ಯ ದೊಡ್ಡಪ್ಪ ಅಪ್ಪ ಸಭಾಮಂಟಪದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ (ಎಸ್ ಬಿ ವಾಣಿಜ್ಯ ಮಹಾವಿದ್ಯಾಲಯ ಆವರಣದಲ್ಲಿ ವಿಚಾರ ಸಂಕೀರ್ಣ ಕಾಯ೯ಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.

ರಾಷ್ಟ್ರೀಯ ಭಕ್ತಿ ಬಿಟ್ಟು ಪಕ್ಷದ ಭಕ್ತಿಯನ್ನು ಬಿಂಬಿಸುವ ಯಾವುದೇ ಅಂಶಗಳನ್ನು ಪಠ್ಯಗಳಲ್ಲಿ ಬಿಂಬಿಸಿರುವುದಿಲ್ಲ.ಸಂವಿಧಾನದ ಆಶಯಗಳ ಪೂರಕವಾಗಿ ಪಠ್ಯಪುಸ್ತಕಗಳ ರಚನೆ ಮಾಡಲಾಗಿದೆ ಎಂದು ಹೇಳಿದರು.

ಹೆಡ್ಗೇವಾರ್ ಅವರ ಪಠ್ಯಪುಸ್ತಕ ಎಂದು ಕರೆಯುವುದಾದರೇ, ನೆಹರೂ ಅವರ ಕಾಲದಲ್ಲಿ ರಚನೆ ಮಾಡಲಾದ ಪಠ್ಯಪುಸ್ತಕ ವನ್ನು ಎನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಜ್ಞಾನದ ಜೊತೆಗೆ ನೈತಿಕ ಸಾಮಥ್ಯ೯ದ ಅವಶ್ಯಕತೆ ಇದೆ. ಪಠ್ಯಗಳಲ್ಲಿನ ವಿಷಯಗಳು ಮುಖ್ಯವಾಗಿರಬೇಕೆ ವಿನಹ: ಅದರೊಳಗಿನ ಕೊಡಕು ಹುಡುಕುವ ಸಂಗತಿಯಲ್ಲಾ ಎಂದರು.

ಪಠ್ಯಗಳಿಂದ ಗೆಲ್ಲಬೇಕಾಗಿರುವುದು ದೇಶವೇ, ಹೊರತು ಪಕ್ಷವಲ್ಲ. ನಮ್ಮ ಭಾರತದಲ್ಲಿ ಸ್ವಾತಂತ್ರ್ಯದ ಮಹತ್ವ, ಸಹೋದರತ್ವ,ಸಮಗ್ರತೆ ಬಗ್ಗೆ ಸಂವಿಧಾನದಲ್ಲಿ ಇದೆ.ಇದರ ಆಶಯಗಳ ಅನುಗುಣವಾಗಿ ಪಠ್ಯವನ್ನು ರಚಿಸಲಾಗಿದೆ ಎಂದು ಹೇಳಿದ ಅವರು, ಯಾರನ್ನು ಸಹ ಅವಮಾನಿಸುವ ಸಂಗತಿಗಳನ್ನು ಬಿಂಬಿಸಿಲ್ಲಾ ಎಂದರು.

ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಕಲಿಸಲು ನಮ್ಮ ಭಾರತದ ಸಂವಿಧಾನ ಹೇಳುತ್ತದೆ. ಆದರೆ,ಒಂದು ವೇಳೆ ಯಾವುದೇ ಪಕ್ಷದ ಪರವಾಗಿ ಪಠ್ಯಪುಸ್ತಕ ಇದ್ದರೆ, ಅದನ್ನು ಖಡಾಖಂಡಿತವಾಗಿ ತಿದ್ದಬೇಕೆಂದು ಹೇಳಿದರು.

ಕಾಯ೯ಕ್ರಮದಲ್ಲಿ ಪ್ರಶ್ನೋತ್ತರಗಳು ನಡೆದವು. ಈ ಸಂದರ್ಭದಲ್ಲಿ ಶ್ರೀಯುತ ಮಹಾದೇವಯ್ಯಾ ಕರದಳ್ಳಿ, ,ಮುಖಂಡರಾದ ಬಿ.ಜಿ.ಪಾಟೀಲ್, ಶಾಸಕ ರಾಜಕುಮಾರ ಪಾಟೀಲ್, ಶಶೀಲ ನಮೋಶಿ, ಬಿಜೆಪಿ ಅಧ್ಯಕ್ಷ ಸಿದ್ದಾಜೀ ಪಾಟೀಲ್, ಅಂಬಾರಾಯ ಅಷ್ಟಗಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಹಲವರು ವಿಚಾರ ಸಂಕೀರ್ಣ ಕಾಯ೯ಕ್ರಮದಲ್ಲಿ ಭಾಗವಹಿ‌ಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!