ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ: ಜಪಾನ್‌ ಹೈಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ. ವಿವಾಹಕ್ಕೆ ಅವಕಾಶ ನೀಡಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಜಪಾನ್‌ ಹೈಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

ಪ್ರಸ್ತುತ ವಿವಾಹ ಕಾನೂನನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ.ಕಾನೂನನ್ನು ಪರಿಷ್ಕರಿಸದ ಹೊರತು ಎಲ್‌ಜಿಬಿಟಿಕ್ಯು + ದಂಪತಿಗಳು ಅಥವಾ ಇತರ ರೀತಿಯ ವಿವಾಹಗಳಿಗೆ ಅನುಮತಿಸುವ ಹೊಸ ಕಾನೂನನ್ನು ಜಾರಿಗೊಳಿಸದ ಹೊರತು ಸರ್ಕಾರಿ ಕಚೇರಿಗಳು ಸಲಿಂಗ ದಂಪತಿಗಳಿಗೆ ವಿವಾಹ ಮಾನ್ಯತೆ ನಿರಾಕರಿಸುವುದನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದೆ.

ಸಲಿಂಗಿ ಜೋಡಿಗಳಿಗೆ ಮದುವೆಯಾಗಲು ಮತ್ತು ಸಾಮಾನ್ಯ ದಂಪತಿಗಳಿಗಿರುವ ಪ್ರಯೋಜನಗಳನ್ನು ಪಡೆಯಲು ಅನುಮತಿ ನಿರಾಕರಿಸುವುದು, ಕುಟುಂಬವನ್ನು ಹೊಂದುವ ಸಲಿಂಗಿ ದಂಪತಿಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸಪ್ಪೋರೊ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೇಳಿದೆ.

ಟೋಕಿಯೊ ಜಿಲ್ಲಾ ನ್ಯಾಯಾಲಯದ ತೀರ್ಪು, ಜಪಾನ್‌ನ ಎಲ್‌ಜಿಬಿಟಿಕ್ಯು+ ಸಮುದಾಯವು ಸಮಾನ ವಿವಾಹ ಹಕ್ಕುಗಳಿಗೆ ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕಿರುವ ಭಾಗಶಃ ಜಯವಾಗಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!