ಮಾಲ್ಡೀವ್ಸ್ ನತ್ತ ಭಾರತೀಯರ ನಿರಾಸಕ್ತಿ: ಪ್ರವಾಸಿಗರ ಆಗಮನ 33% ಕುಸಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಲ್ಡೀವ್ಸ್ ನತ್ತ ಭಾರತೀಯ ಪ್ರವಾಸಿಗರ ಒಲವು ಕಡಿಮೆಯಾಗಿದ್ದು, ಶೇ.33 ಕುಸಿತವನ್ನು ಕಂಡಿದೆ. ಇದರೊಂದಿಗೆ2024 ರಲ್ಲಿ ಭಾರತವು ಪ್ರವಾಸಿಗರ ಆಗಮನದಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.

ಕೊರೋನಾ ಸಮಯದಲ್ಲಿಯೂ ದ್ವೀಪ ರಾಷ್ಟ್ರಕ್ಕೆ ಭಾರತೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. 2020 ರಿಂದಲೂ ಮೊದಲ ಸ್ಥಾನದಲ್ಲಿ ಭಾರತವಿತ್ತು. ಆದರೆ ಮಾರ್ಚ್ 2 ರ ಹೊತ್ತಿಗೆ ಭಾರತದಿಂದ 27,224 ಪ್ರವಾಸಿಗರ ಆಗಮನವಾಗಿದೆ ಎಂದು ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 33 ಶೇಕಡಾ ಇಳಿಕೆಯಾಗಿದೆ.

ದೆಹಲಿ ಮತ್ತು ಮಾಲೆ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕ್ಷೀಣಿಸುತ್ತಿರುವುದರಿಂದ, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ ಕಳೆದ ವರ್ಷ ಮಾರ್ಚ್‌ಗೆ ಹೋಲಿಸಿದರೆ ದೇಶದಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 33 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ.

ಭಾರತವು ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿರುವುದು ಒಂದೆಡೆಯಾದರೆ ಚೀನಾ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡಿದೆ. ಚೀನಾ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಬಲಗೊಳ್ಳುತ್ತಿದ್ದಂತೆ, 2024 ರಲ್ಲಿ ದೇಶಕ್ಕೆ 54,000 ಪ್ರವಾಸಿಗರ ಆಗಮನವನ್ನು ಕಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!