Friday, December 8, 2023

Latest Posts

ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಿದವರನ್ನು ಗಡಿಪಾರು ಮಾಡಿ: ಒತ್ತಾಯ

ಹೊಸದಿಗಂತ ವರದಿ ಶಿವಮೊಗ್ಗ:

ನಗರದ ರಾಗಿಗುಡ್ಡದಲ್ಲಿ ಈದ್ ಮೆರವಣಿಗೆ ವೇಳೆ ಹಿಂದೂ ಸಮಾಜದ ಮನೆಗಳವರ ಮೇಲೆ ಕಲ್ಲು ತೂರಾಟ, ಮಹಿಳೆಯರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಗಡೀಪಾರು ಮಾಡಬೇಕು ಎಂದು ಹಿಂದೂ ಸಮಾಜದ ಮುಖಂಡ ನಟರಾಜ ಭಾಗವತ್ ಆಗ್ರಹಿಸಿದ್ದಾರೆ.

ಜಿಲ್ಲಾಕಾರಿಗಳ ಕಚೇರಿ ಎದುರು ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೂಗಳನ್ನು ಈ ನೆಲದಿಂದ ಓಡಿಸಬೇಕು ಎಂಬ ಉದ್ದೇಶದಿಂದ ಮೂರು ರೀತಿಯ ಜಿಹಾದ್ ನಡೆಸಲಾಗುತ್ತಿದೆ. ಲವ್ ಜಿಹಾದ್, ಭೂ ಜಿಹಾದ್ ಹಾಗೂ ಡ್ರಗ್ಸ್‌ ಜಿಹಾದ್. ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿರುವುದು ಭೂ ಜಿಹಾದ್. ಬೆದರಿಕೆ ತಂತ್ರದ ಮೂಲಕ ಅಲ್ಲಿನ ಹಿಂದೂಗಳು ಜಾಗ ಖಾಲಿ ಮಾಡುವಂತೆ ಮಾಡುವುದೇ ಇವರ ಉದ್ದೇಶ. ಇಂತ ಬೆದರಿಕೆಗಳಿಗೆ ಸಮಾಜ ಜಗ್ಗುವುದಿಲ್ಲ. ಈ ತರಹದ ಬೆದರಿಕೆ ಹಾಕುವವರನ್ನು ಅಲ್ಲಿಂದ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಈ ಮಾನಸಿಕತೆ ಕೇವಲ ರಾಗಿಗುಡ್ಡಕ್ಕೆ ಸೀಮಿತ ಆಗಿಲ್ಲ. ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ಈ ಹಿಂದೆ ಶೇ.80 ರಷ್ಟು ಹಿಂದೂಗಳು ಇದ್ದರು. ಈಗ ಕೇವಲ ಶೇ.20 ರಷ್ಟು ಮಂದಿ ಮಾತ್ರ ಇದ್ದಾರೆ. ಪ್ರತಿನಿತ್ಯ ಹಿಂದೂಗಳ ಮನೆ ಮುಂದೆ ಗಲಾಟೆ, ಹೊಡೆದಾಟ, ಭಯ ಹುಟ್ಟಿಸುವ ಮೂಲಕ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಮಾಡಿದ್ದಾರೆ. ಆದರೆ ರಾಗಿಗುಡ್ಡದಲ್ಲಿ ಹಾಗೆ ಆಗಲು ಬಿಡಬಾರದು. ಅಲ್ಲಿ ಹಿಂದೂಗಳ ಮನೆಯಲ್ಲಿ ಮುಸ್ಲಿಮರು ಬಾಡಿಗೆಗೆ ಇದ್ದಾರೆ. ಕೂಡಲೇ ಅವರುಗಳನ್ನು ಬಾಡಿಗೆ ಮನೆಯಿಂದ ಬಿಡಿಸಿ ಕಳಿಸಿ ಎಂದು ಕರೆ ನೀಡಿದರು.

ಪ್ರತಿ‘ಟನೆಯಲ್ಲಿ ಪಾಲ್ಗೊಂಡಿದ್ದ ರಾಗಿಗುಡ್ಡದಲ್ಲಿ ಗಲಭೆಯಲ್ಲಿ ಸಿಲುಕಿದ್ದ ಮಹಿಳೆಯರು ಅಂದಿನ ದಾಳಿ ಚಿತ್ರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್, ಬಜರಂಗದಳ ವಿಭಾಗ ಸಂಚಾಲಕ ರಾಜೇಶ್ ಗೌಡ, ನಾರಾಯಣ ವರ್ಣೇಕರ್, ವಡಿವೇಲು ರಾಘವನ್, ರಮೇಶ್ ಜಾ‘ವ್, ಕೋಟೆ ರಾಜು, ಸುರೇಶ್ ಬಾಬು, ಶಾಂತಮ್ಮ, ಸವಿತಮ್ಮ, ವೆಂಕಟಮ್ಮ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!