ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಶುಪಾಲನಾ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಸರಕಾರ ಕಳಿಸುವ ಪೌಷ್ಟಿಕ ಆಹಾರದಲ್ಲಿ ಸತ್ತ ಹಾವಿನ ಕಳೇಬರ ಪತ್ತೆಯಾಗಿದೆ. ಈ ವಿಚಾರ ಕೇಳುತ್ತಿದ್ದಂತೆಯೇ ಸರಕಾರ ನೀಡುವ ಪೌಷ್ಟಿಕಾಂಶ ಆಹಾರ ಗುಣಮಟ್ಟವಾಗಿದೆ? ಎಂದು ನಂಬಲು ಅಸಾಧ್ಯವಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಬಂಗೂರಪಾಳ್ಯಂ ಮಂಡಲದ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಇಂತಹ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿಯೊಬ್ಬರು ಅಂಗನವಾಡಿ ಕೇಂದ್ರದಿಂದ ಪೌಷ್ಟಿಕ ಆಹಾರ ತೆಗೆದುಕೊಂಡಿದ್ದಾರೆ. ಬಳಿಕ ಮನೆಗೆ ತೆರಳಿ ಪೌಷ್ಠಿಕಾಂಶದ ಪೊಟ್ಟಣವನ್ನು ತೆರೆದು ನೋಡಿದಾಗ ಅದರಲ್ಲಿ ಹಾವಿನ ಕಳೇಬರ ಪತ್ತೆಯಾಗಿದೆ.
ಇದರಿಂದ ಗಾಬರಿಗೊಂಡ ಮಹಿಳೆ ಅಂಗನವಾಡಿ ಮೇಲ್ವಿಚಾರಕಿಗೆ ವಿಷಯ ಮುಟ್ಟಿಸಿದ್ದಾರೆ. ಅಂಗನವಾಡಿ ಮೇಲ್ವಿಚಾರಕಿಯರ ನೆರವಿನಿಂದ ಸಿಡಿಪಿಒಗೆ ದೂರು ನೀಡಲಾಗಿದ್ದು, ಘಟನೆ ಕುರಿತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸಿಡಿಪಿಒ ತಿಳಿಸಿದ್ದಾರೆ.