ಮುಂಗಾರಿಗೆ ಸಹಾಯ ಮಾಡಲಿದೆ ಅಂಡಮಾನ್‌ ಸಮುದ್ರದಲ್ಲಾದ ವಾಯುಭಾರ ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಅಂಡಮಾನ್‌ ಸಮುದ್ರದಲ್ಲಿ ವಾಯುಭಾರ ಕುಸಿತ (ಡಿಪ್ರೆಷನ್) ರೂಪುಗೊಳ್ಳುತ್ತಿದ್ದು ಇದು ಭಾರತದ ಮುಂಗಾರಿಗೆ ಧನಾತ್ಮಕವಾಗಿ ಪರಿಣಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯೆಯು ಹೇಳಿದೆ.

ಹವಮಾಣ ಇಲಾಖೆಯ ಚಂಡಮಾರುತಗಳ ಮೇಲುಸ್ತುವಾರಿ ವಹಿಸಿರುವ ಆನಂದ ಕುಮಾರ್‌ ದಾಸ್‌ ರವರ ಪ್ರಕಾರ ಸಮಭಾಜಕ ವೃತದ ಬಳಿ ಅಂತರ್ ಉಷ್ಣವಲಯದ ಒಮ್ಮುಖ ವಲಯ (ಇಂಟರ್ಟ್ರೋಪಿಕಲ್ ಕನ್ವರ್ಜೆನ್ಸ್ ಝೋನ್) ದಲ್ಲಿ ಮೋಡಗಳು ಸಕ್ರಿಯವಾಗಿದೆ. ಇದು ಶೀಘ್ರದಲ್ಲೇ ಮುಂಗಾರು ಉಲ್ಬಣಗೊಳ್ಳಲು ಸಹಾಯ ಮಾಡುತ್ತದೆ. ಅಂಡಮಾನ್‌ ಸಮುದ್ರದ ಬಳಿ ಉಂಟಾದ ಡಿಪ್ರೆಷನ್‌ನಿಂದ ಜೂನ್‌ 1 ರ ಸಮಯದಲ್ಲಿ ಕೇರಳಕ್ಕೆ ಮಾನ್ಸೂನ್‌ ಬರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ವಾಯುಭಾರ ಕುಸಿತ  (ಡಿಪ್ರೆಷನ್)‌ ಎಂದರೇನು?
ಹವಾಮಾನವು ಅಸ್ಥಿರ ಪರಿಸ್ಥಿತಿಗಳಿಂದ ಪ್ರಭಾವಿತವಾದಾಗ ವಾಯುಭಾರ ಕುಸಿತವು ಸಂಭವಿಸುತ್ತದೆ. ಇದರಿಂದ ಗಾಳಿಯು ಮೇಲ್ಮುಖವಾಗಿ ಏರುತ್ತದೆ, ಮೇಲ್ಮೈಯಲ್ಲಿ ಕಡಿಮೆ ಒತ್ತಡದ ಪ್ರದೇಶವನ್ನು ರೂಪಿಸುತ್ತದೆ. ಈ ಏರುತ್ತಿರುವ ಗಾಳಿಯು ಮೇಲೆ ಹೋದಂತೆಲ್ಲಾ ತಂಪಾಗುತ್ತದೆ ಮತ್ತು ಘನೀಕರಿಸುತ್ತದೆ. ಇದು ಮೋಡದ ರಚನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!