ಹೊಸದಿಗಂತ ವರದಿ, ಶಿವಮೊಗ್ಗ:
ರಾಗಿಗುಡ್ಡ ಗಲಬೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಅಭಯ ಪ್ರಕಾಶ ಸೋಮನಾಳ, ಸಿಬ್ಬಂದಿಗಳಾದ ಕಾಶಿನಾಥ, ರಂಗನಾಥ ಹಾಗೂ ಶಿವರಾಜ್ ಎಂಬುವರನ್ನು ಅಮಾನತು ಮಾಡಲಾಗಿದೆ.
ಪ್ಲೆಕ್ಸ್ ವಿಚಾರವಾಗಿ ಅ.೧ ರಂದು ಬೆಳಗ್ಗೆಯೇ ಗಲಾಟೆ ನಡೆದಿದ್ದು, ಆಗಲೇ ಎಚ್ಚರ ವಹಿಸಿದ್ದರೆ ದೊಡ್ಡಮಟ್ಟದಲ್ಲಿ ಗಲಾಟೆಯಾಗುತ್ತಿರಲಿಲ್ಲ ಎಂಬ ವರದಿ ಹಿನ್ನೆಯಲ್ಲಿ ಸಿಬ್ಬಂದಿಯ ಅಮಾನತು ಮಾಡಲಾಗಿದೆ.