ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರದಿಂದ ಹಣ ಉದುರುವುದನ್ನು ಎಲ್ಲಾದರೂ ನೋಡಿದ್ದೀರಾ? ಇಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ತಮಾಷೆಯ ವಿಡಿಯೋ ಬಗ್ಗೆ ನಾನಾ ಕಮೆಂಟ್‌ಗಳು ಹರಿದಾಡುತ್ತಿದ್ದು, ಪ್ರ್ಯಾಂಕ್ ಮೋಡೋಕು ಧಯರ್ಯವಿರಬೇಕು, ಅದರಲ್ಲೊಂದು ಸಂದೇಶವಿರಬೇಕು ಎಂಬ ಅಭಿಪ್ರಾಯ ಹೊರಬರುತ್ತಿವೆ. ಮರ ಅಲುಗಾಡಿಸಿದರೆ ಹಣ ಉದುರುವ ವಿಡಿಯೋ ಹಿಂದೆ ಅತಿ ಆಸೆ ಗತಿ ಕೇಡು ಎಂಬ ಸಂದೇಶ ಇದೆ ಅಂತಿದಾರೆ ನೆಟ್ಟಿಗರು.
ಯುವಕನೊಬ್ಬ ರಸ್ತೆ ಪಕ್ಕದಲ್ಲಿದ್ದ ಮರವನ್ನು ಒದ್ದಿದ್ದರಿಂದ ಮೇಲಿಂದ ಹಣದ ಸುರಿಮಳೆಯಾಗಿದೆ. ಇದನ್ನೆಲ್ಲಾ ಅಲ್ಲೇ ನಿಂತು ನೋಡುತ್ತಿದ್ದವರಿಗೆ ತುಂಬಾ ಆಶ್ಚರ್ಯವಾಗಿತ್ತು. ಕೊನೆಗೆ ಕಾತುರ ತಡೆಯಲಾರದೆ ಮತ್ತೊಬ್ಬ ಯುವಕ ಆಶಾಭಾವನೆಯಿಂದ ಮರವನ್ನು ಅಲ್ಲಾಡಿಸಲು ಯತ್ನಿಸಿದ. ಅಷ್ಟರಲ್ಲಿ ಮರದಿಂದ ನೀರು ಅವನ ಮೇಲೆ ಬಿದ್ದಿದೆ. ಇದೆಲಾ ಪ್ರ್ಯಾಂಕ್ ವಿಡಿಯೋ ಎಂದು ತಿಳಿದರೂ ದುರಾಸೆ ಒಳ್ಳೆಯದಲ್ಲ ಎಂಬ ಉತ್ತಮ ಸಂದೇಶವನ್ನು ಈ ವಿಡಿಯೋ ನೀಡುತ್ತಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.