ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮೀಜಿ

ಹೊಸದಿಗಂತ ವರದಿ ಕಲಬುರಗಿ: 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಪರ್ಸೆಂಟೇಜ್ ವ್ಯವಹಾರ ನಡೆದಿಲ್ಲ, ಬಸವಣ್ಣನಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಜಗದ್ಗುರು ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ,ಮಠಗಳಿಗೆ ಅನುದಾನ ನೀಡಲು 30% ನೀಡಬೇಕು ಎಂಬ ಆರೋಪದ ಬಗ್ಗೆ ಮಾತನಾಡಿ,ದಿಂಗಾಲೇಶ್ವರ ಸ್ವಾಮೀಜಿಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಕಲಬುರಗಿ ಜಿಲ್ಲೆಯ ಮಠಗಳಿಗೆ 6 ಕೋಟಿ ಅನುದಾನ ಕೊಟ್ಟಿದ್ದಾರೆ. ಅನುದಾನ ಬಿಡುಗಡೆಗೆ ನಾವು ನಯಾ ಪೈಸೆ ಕಮೀಷನ್ ಕೊಟ್ಟಿಲ್ಲ. ಬಳಿಕ ರಾಜ್ಯದಲ್ಲಿ ಸಮ್ಮೀಶ್ರ ಸಕಾ೯ರದಲ್ಲಿ ಈ ಭಾಗದ ಪ್ರೀಯಾಂಕ್ ಖರ್ಗೆ ಪ್ರವಾಸೋದ್ಯಮ ಇಲಾಖೆಯ ಸಚಿವರಾದಾಗ ಅವರು ಸಹ 25 ಕೋಟಿ ಅನುದಾನ ಎಲ್ಲಾ ಮಠಗಳಿಗೆ ನೀಡಿದ್ದು,ಅವರು ಸಹ ನಯಾ ಪೈಸೆ ಕಮೀಷನ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿಯೂ ಸಹ ನಮ್ಮ ಮಠಕ್ಕೆ 20 ಲಕ್ಷ ಅನುದಾನ ಬಂದಿದೆ.ಆದರೆ ಯಾವತ್ತೂ ಸಹ ಕಮೀಷನ್ ಪಡೆದಿಲ್ಲ.ಅದೇ ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸಕಾ೯ರ ಸಾಕಷ್ಟು ಮಠಗಳಿಗೆ ಅನುದಾನ ನೀಡಿದ್ದು, ಒಂದು ದಿನವಾದರೂ ರಾಜ್ಯ ಸರಕಾರ ಪಸೇಂಟೆಜ್ ಕೇಳಿಲ್ಲ ಎಂದು ಹೇಳಿದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಲು ನಾವು ಕಾರಣವೆಂದು ಇತ್ತೀಚೆಗೆ ದಿಂಗಾಲೇಶ್ವರ ಸ್ವಾಮೀಜಿ ಹೆಳಿಕೆ ನೀಡಿದ್ದರು. ಸಧ್ಯ ಅಣ್ಣ ಬಸವಣ್ಣನವರಂತೆ ಬಸವರಾಜ ಬೊಮ್ಮಾಯಿ ಅವರು ಕೆಲಸವನ್ನು ಮಾಡುತ್ತಿದ್ದು, ಅವರ ಸರ್ಕಾರದಲ್ಲಿ ಕಮೀಷನ್ ಎಂಬ ವ್ಯವಹಾರ ನಡೆದಿಲ್ಲ ಎಂದು ನುಡಿದರು.

ಸ್ವಾಮಿಜೀಗಳು ಸೂಜಿಯಾಗಬೇಕೆ ವಿನಃ, ಕತ್ತರಿಯಾಗಬಾರದು ಎಂದು ಹೇಳಿ,ಪರೋಕ್ಷವಾಗಿ ದಿಂಗಾಲೇಶ್ವರ ಸ್ವಾಮೀಜಿಯನ್ನು ಕತ್ತರಿಗೆ ಹೋಲಿಸಿದರು. ಈ ರೀತಿ ಹೇಳಿಕೆ ಕೊಡುವುದು ಸ್ವಾಮೀಜಿಗಳಿಗೆ ಶೋಭೆ ತರುವಂತದಲ್ಲ. ಕಮೀಷನ್ ಪಡೆದಿರುವ ಬಗ್ಗೆ ಎನಾದರೂ ದಾಖಲೆಗಳಿದ್ದರೆ ಬಹಿರಂಗ ಪಡಿಸಲು ಆಗ್ರಹಿಸಿದರು.

ಮಠಾಧೀಶರಲ್ಲು ಸಹ ಎರಡು ಪಂಗಡಗಳಿವೆ. ಮಠಾಧೀಶರು ರಾಜಕೀಯ ಮಾಡುವುದನ್ನು ಬಿಟ್ಟು, ಮಠಕ್ಕೆ ಬಂದ ಭಕ್ತಾದಿಗಳಿಗೆ ಆಶೀರ್ವಾದ ಮಾಡುವುದನ್ನು ಕಲಿಯಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!