August 26, 2026
Wednesday, August 26, 2026
spot_img

ಸಿಎಂ ಆದರೂ ರಿಯಲ್ ಎಸ್ಟೇಟ್ ಮನಸ್ಥಿತಿ ಬದಲಾಗಿಲ್ಲ: ಡಿಕೆ ಶಿವಕುಮಾರ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಹೊಸದಿಗಂತ ವರದಿ ಗದಗ:

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸಿಎಂ‌ ಕಪಟ ನಾಟಕ ಆಡ್ತಾಯಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದ್ರೂ ರಿಯಲ್ ಎಸ್ಟೇಟ್ ದೊರಣೆಯಿಂದ ಹೊರ ಬಂದಿಲ್ಲ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ಮತೀಯ ಶಕ್ತಿಗಳಿಗೆ ಕರ್ನಾಟಕ ಸ್ವರ್ಗದ ಹಾಗಾಗಿದೆ. ಕೊಲೆ, ದೌರ್ಜನ್ಯ ನಡೆದ್ರೂ ಮತೀಯಗಳಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡ್ತಿದೆ ಎಂದರು.

ಬಿಡದಿ ಟೌನಶಿಪ್ ವಿಚಾರದಲ್ಲಿ ಡಿಕೆಶಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡು 24 ಗಂಟೆಗಳಲ್ಲಿ, ಬಿಡದಿನಲ್ಲಿ ರೈತರ ಫಲವತ್ತಾದ ಜಮೀನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಒಂದ್ಕಡೆ ಹೇಳ್ತಾರೆ, ಬಲವಂತವಾಗಿ ಕಸಿದುಕೊಳ್ಳಲ್ಲ.

ಸ್ವ-ಇಚ್ಛೆಯಿಂದ ಮುಂದೆ ಬಂದ ರೈತರ ಜಮೀನು ತೆಗೆದುಕೊಳ್ಳುತ್ತೆವೆ ಅಂತಾರೆ. ಆದ್ರೆ, ರಾತ್ರೋರಾತ್ರಿ ಗೂಂಡಾಗಳು ಮನೆ ಬಾಗಿಲಿಗೆ ಬರುತ್ತಾರೆ. ಜಮೀನು ಬಿಟ್ಟುಕೊಡಬೇಕು ಎಂದು ಬೆದರಿಕೆ ಹಾಕ್ತಾಯಿದ್ದಾರೆ ಅಂತ ಸ್ವತಃ ಅಲ್ಲಿಯ ರೈತರೇ ಹೇಳಿದ್ದಾರೆ. ಸಿಎಂ ಹಾಗೂ ಅವರ ಬಂಧು ಬಳಗದವರು ನೂರಾರು, ಸಾವಿರಾರು ಎಕರೆ ಜಮೀನುದಾರರಿದ್ದಾರೆ. ಅವರ ಜಮೀನು ಬಿಟ್ಟು, ಸಣ್ಣ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಸ್ಥಳೀಯ ರೈತರ ಆರೋಪವಾಗಿದೆ ಎಂದರು.

ಬಿಡದಿ ಟೌನ್ ಶಿಪ್ ರಚನೆ ಅವಶ್ಯಕತೆ ಇಲ್ಲ:

ಬಿಡದಿ ಸಮಿತಿ ರಚನೆ ಮಾಡಿದ್ರೂ ಹಿಂದೆ ಸರಿಯುದಿಲ್ಲ ಎಂದು ಸ್ಪಷ್ಟವಾಗಿ ಸಿಎಂ ಹೇಳಿದ್ದಾರೆ. ರೈತರ ನೆಮ್ಮದಿ ಕೆಡಿಸುವ ಕೆಲಸ ರಾಜ್ಯ ಸರ್ಕಾರ ಮಾಡ್ತಿದೆ. ಅಲ್ಲಿ ಸಮಿತಿ ಮಾಡುವ ಅವಶ್ಯಕತೆ ಇಲ್ಲ. ಭೂಮಿ ಬಿಟ್ಟುಕೊಡೋದಿಲ್ಲ ಎಂಬ ರೈತರ ಸ್ಪಷ್ಟ ನಿಲುವು ಇದ್ರೂ, ಸಮಿತಿ ಮಾಡುತ್ತೆವೆ ಎಂಬುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಈ ಸಮಿತಿ ಅಗತ್ಯತೆ ಇಲ್ಲ ಎಂದರು.

ಇದನ್ನೂ ಓದಿ:

ರಾಹುಲ್ ಗಾಂಧಿ ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರೈತ ಪರ ನಿಲ್ಲಲಿ:

ರಾಹುಲ್ ಗಾಂಧಿ ಎಲ್ಲಿದ್ದಾರೆ. ವಿದೇಶಿ ಪ್ರವಾಸದಲ್ಲಿದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಫೋಟೋ ಅಲ್ಪೋಡ್ ಮಾಡ್ತಾರೆ. ಭಾರತ ಜೋಡೋ ಯಾತ್ರೆ ಮಾಡಿದ್ರು. ರಾಹುಲ್ ಗಾಂಧಿ ಅವ್ರಲ್ಲಿ ಮನವಿ ಸರ್ಕಾರದ ಧೋರಣೆ ಖಂಡಿಸಬೇಕು ಅಂತ ಒತ್ತಾಯ. ಬಿಡದಿ ಅಷ್ಟೇಯಲ್ಲ, ರಾಜ್ಯದ ರೈತರ ರಕ್ಷಣೆ ವಿಚಾರದಲ್ಲಿ ರೈತರ ಪರ ನಿಲ್ಲಬೇಕು ಅಂತ ಒತ್ತಾಯಿಸಿದರು.

ಕುಮಾರಸ್ವಾಮಿ ಹಾಗೂ ಸಿಎಂ ಡಿಕೆಶಿ ಜಟಾಪಟಿ:

ನಾನು ಸಿಎಂ ಆಗಿರೋದು ಸಹಿಸಿಕೊಳ್ಳಲು ಆಗ್ತಾಯಿಲ್ಲ ಎನ್ನುವ ಡೈಲಾಗ್ ಡಿಕೆಶಿ ಕೊಡೆಯುತ್ತಿದ್ದಾರೆ. ಡೈಲಾಗ್ ಬಿಡಬೇಕು ಸಿಎಂ ರೈತರ ನೆರವಿಗೆ ಬರಬೇಕಾಗುತ್ತದೆ. ಸಿಎಂ ಚಾಣಾಕ್ಷತನದಿಂದ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದ್ರು. ಈಗ ರೈತರ ಜಮೀನು ಕಸಿದುಕೊಳ್ಳುತ್ತಿದ್ದಾರೆ. ಸಿಎಂ ಹಾಗೂ ಬಂಧುಬಳಗ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ. ಯಾಕೇ ಅಲ್ಲಿ ಮಾಡಬಾರದು ಅಂತ ರೈತರು ಹೇಳ್ತಾಯಿದ್ದಾರೆ. ರೈತರ ಒಕ್ಕಲೆಬಿಸುವ ಕೆಲಸ‌ ಮಾಡಬೇಡಿ. ರೈತರ ಶಾಪಕ್ಕೆ ಒಳಗಾಗಬೇಡಿ ಅಂತ ಎಚ್ಚರಿಕೆ ನೀಡಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಎಮ್.ಎಮ್ ಹಿರೇಮಠ, ಎಮ್.ಎಸ್ ಕರಿಗೌಡ್ರ, ಭೀಮಸಿಂಗ್ ರಾಠೋಡ್, ಅನಿಲ ಅಬ್ಬಿಗೇರಿ ಸೇರಿದಂತೆ ಪಕ್ಷದ ಅನೇಕರು ಕಾರ್ಯಕರ್ತರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !