September 20, 2026
Sunday, September 20, 2026
spot_img

ಹಣ ಡೆಬಿಟ್, ಟಿಕೆಟ್ ಮಿಸ್ಸಿಂಗ್: BMTC ಬಸ್‌ಗಳಲ್ಲಿ ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ತಾಂತ್ರಿಕ ಸಮಸ್ಯೆ ಹೊಸ ತಲೆನೋವಾಗಿ ಪರಿಣಮಿಸಿದೆ. ಹಣ ಖಾತೆಯಿಂದ ಕಡಿತವಾಗುತ್ತಿದ್ದರೂ ಟಿಕೆಟ್ ಪ್ರಿಂಟ್ ಸಿಗದ ಘಟನೆಗಳು ಹಲವು ಬಸ್‌ಗಳಲ್ಲಿ ವರದಿಯಾಗಿವೆ.

ಹಣ ಕಡಿತ, ಟಿಕೆಟ್ ಇಲ್ಲ

ಹೆಬ್ಬಾಳ–ಸಿಲ್ಕ್ ಬೋರ್ಡ್ ಮಾರ್ಗ ಸೇರಿದಂತೆ ಕೆಲವು ಬಸ್‌ಗಳಲ್ಲಿ ಯುಪಿಐ ಪಾವತಿ ಯಶಸ್ವಿಯಾದರೂ ETM ಯಂತ್ರದಿಂದ ಟಿಕೆಟ್ ಹೊರಬರದ ಕಾರಣ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಗೊಂದಲ ಉಂಟಾಗಿದೆ. ಕೆಲವರು ಒಂದೇ ಟಿಕೆಟ್‌ಗಾಗಿ ಎರಡು-ಮೂರು ಬಾರಿ ಹಣ ಪಾವತಿಸಿದರೂ ಟಿಕೆಟ್ ಸಿಗದ ಘಟನೆಗಳೂ ನಡೆದಿವೆ.

ಇದನ್ನೂ ಓದಿ:

ಪರಿಹಾರಕ್ಕೆ ಒತ್ತಾಯ

ಈ ಸಮಸ್ಯೆಯಿಂದ ಹಲವು ಬಸ್‌ಗಳು ಕೆಲಕಾಲ ನಿಂತಿದ್ದು, ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ, ತಾಂತ್ರಿಕ ದೋಷವನ್ನು ತಕ್ಷಣ ಸರಿಪಡಿಸಿ ಅಧಿಕೃತ ಸ್ಪಷ್ಟನೆ ನೀಡುವಂತೆ ಬಿಎಂಟಿಸಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !