ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ನಿರ್ಬಂಧದ ಹೊರತಾಗಿಯೂ ಕದ್ದು ಮುಚ್ಚಿ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗಿದೆ.ಮಹಿಷ ದಸರಾ ಸಮಿತಿಯ 5 ಸದಸ್ಯರನ್ನು ಪೊಲೀಸರೆ ಕರೆದೋಯ್ದು ಪುಷ್ಪರ್ಚನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ನಿಷೇಧಾಜ್ಞೆ ಹಿನ್ನೆಲೆಯಲ್ಲಿ 5ಕ್ಕಿಂತ ಹೆಚ್ಚು ಜನರು ಸೇರಲು ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸಮಿತಿಯ 5 ಸದಸ್ಯರನ್ನು ಪೊಲೀಸರೆ ಕರೆದೋಯ್ದು ಪುಷ್ಪರ್ಚನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಮೈಸೂರಲ್ಲಿ ಮಹಿಷ ಆಚರಣೆಗೆ ವಿಧಿಸಿದ್ದ ನಿಷೇಧಾಜ್ಞೆಯನ್ನು ಈ ಮೂಲಕ ಪೊಲೀಸರೇ ಮುಂದೆ ನಿಂತು ಉಲ್ಲಂಘನೆಯಾಗುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಟೌನ್ ಹಾಲ್ ಹೊರತುಪಡಿಸಿ ಮೈಸೂರಲ್ಲಿ ಮಹಿಷ ಆಚರಣೆಗೆ ನಿಷೇಧಜ್ಞೆ ಹೇರಲಾಗಿತ್ತು.