ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮಿಡಿ ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಲಿಸುವ ಕಲಾವಿದ ಧನರಾಜ್ ಆಚಾರ್ಯ ಈಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಗ್ರ್ಯಾಂಡ್ ಆಗಿ ಬಂದ ಧನರಾಜ್ ಆಚಾರ್ಯ ಅವರನ್ನು ಕಿಚ್ಚ ಸುದೀಪ್ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ತಮ್ಮ ಕುಟುಂಬಸ್ಥರ ಜೊತೆ ಸೇರಿಕೊಂಡು ಕಂಟೆಂಟ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಧನರಾಜ್ ಆಚಾರ್ಯ ವಿಭಿನ್ನ ಕಾಮಿಡಿ ಮ್ಯಾನರಿಸಂಗೆ ನೆಟ್ಟಿಗರು ಮನಸೋತಿದ್ದರು.
ಇನ್ನು, ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಇಬ್ಬರು ನಟಿಯರು ಮುಂಬರುವ ಸ್ಪರ್ಧಿಗಳು ನರಕಕ್ಕೆ ಹೋಗಬೇಕಾ ಅಥವಾ ಸ್ವರ್ಗಕ್ಕೆ ಹೋಗಬೇಕಾ ಅಂತ ನಿರ್ಧಾರ ಮಾಡಲು ಅವಕಾಶ ನೀಡಲಾಗಿತ್ತು, ಕೊನೆಗೂ ಇಬ್ಬರು ನಟಿಯರು ಅವರನ್ನು ಸ್ವರ್ಗಕ್ಕೆ ಸ್ವಾಗತಿಸಿದ್ದಾರೆ.