ಏನಿದು ಅಲ್‌ಖೈದಾ ಮುಖ್ಯಸ್ಥಗೆ ಯಮ ಪಾಶವಾದ ಹೆಲ್‌ಫೈರ್ ಆರ್9ಎಕ್ಸ್ ಮಿಸೈಲ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲ್‌ಖೈದಾ ಮುಖ್ಯಸ್ಥ ಅಯಮಾನ್ ಅಲ್-ಜವಾಹಿರಿಯನ್ನು ಹೊಡೆದುರುಳಿಸಿರುವ ಹೆಲ್‌ಫೈರ್ ಆರ್9ಎಕ್ಸ್  ಕ್ಷಿಪಣಿ ಈಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ!

ಇಷ್ಟಕ್ಕೂ ಏನಿದು ಹೆಲ್‌ಫೈರ್ ಆರ್೯ಎಕ್ಸ್ ಕ್ಷಿಪಣಿ? ಏನೇನಿರುತ್ತದೆ ಇದರಲ್ಲಿ? ಕುತೂಹಲ ನಿಮಗಿದ್ದರೆ ಒಂದಿಷ್ಟು ಡಿಟೈಲ್ಸ್ ಇಲ್ಲಿದೆ ಓದಿಕೊಳ್ಳಿ…

ಜವಾಹಿರಿಯನ್ನು ಹೊಡೆದುರುಳಿಸಲು ಅಮೆರಿಕ ಬಳಿಸಿದ ಹೆಲ್‌ಫೈರ್ ಆರ್9ಎಕ್ಸ್ ಕ್ಷಿಪಣಿ ಉದ್ದ ಕೇವಲ 1.6 ಮೀಟರ್, ಅಗಲ 7 ಇಂಚು. ಈ ಕ್ಷಿಪಣಿಯಲ್ಲಿ 5 ಬಗೆಯ ಸಿಡಿತಲೆ ಅಳವಡಿಕೆ ಮಾಡಲಾಗಿತ್ತು. ಇದರ ತೂಕ 45 ಕೆ.ಜಿ. ಇದರ ರೆಕ್ಕೆಗಳು 13 ಇಂಚು. ಕ್ಷಿಪಣಿಯ ವ್ಯಾಪ್ತಿಯು 499 ಮೀಟರ್‌ಗಳಿಂದ 11.01 ಕಿಲೋ ಮೀಟರ್. ಗರಿಷ್ಠ ವೇಗ ಗಂಟೆಗೆ 1,601 ಕಿ. ಮೀ.!

ಅಂದಹಾಗೆ ಇದು ಲೇಸರ್ ಮತ್ತು ರೇಡಾರ್ ಸೀಕರ್ ತಂತ್ರಜನದ ಮೇಲೆ ಹಾರುತ್ತದೆ. ಅಂದರೆ ಲೇಸರ್ ಮೂಲಕ ರಾಡಾರ್ ಮೂಲಕ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಗುರಿಯನ್ನು ಗುರಿಯಾಗಿಸಬಹುದು. ಇದರಲ್ಲಿ ಕಡಿಮೆ ಗನ್ ಪೌಡರ್, ಆದರೆ ಹೆಚ್ಚು ಬ್ಲೇಡ್ ಮತ್ತು ಚೂಪಾದ ಲೋಹಗಳನ್ನು ಬಳಸಲಾಗಿದೆ.

ಆರ್‌9ಎಕ್ಸ್ ಹೆಲ್‌ಫೈರ್ ಕ್ಷಿಪಣಿಯನ್ನು ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು, ಫೈಟರ್ ಜೆಟ್‌ಗಳಿಂದ ಹಾರಿಸಬಹುದು. ಕ್ಯಾಮೆರಾಗಳು, ಸೆನ್ಸಾರ್‌ಗಳನ್ನು ಅದರ ಮೂಗಿನ ಮೇಲೆ ಜೋಡಿಸಲಾಗಿದೆ. ಇದು ಸ್ಫೋಟದ ಮೊದಲು ರೆಕಾಡಿಂಗ್ ಮಾಡುತ್ತಿರುತ್ತದೆ. ಅದರಲ್ಲಿರುವ ಮದ್ದುಗುಂಡುಗಳ ಪ್ರಮಾಣ ಬಹಳ ಕಡಿಮೆ. ಚೂಪಾದ ಅಂಚಿನ ಲೋಹದ ಬ್ಲೇಡ್‌ಗಳನ್ನು ಹೊಂದಿರುತ್ತದೆ. ಇವುಗಳನ್ನು ವಿವಿಧ ಪದರಗಳಲ್ಲಿ ಅನ್ವಯಿಸಲಾಗುತ್ತದೆ. ಗನ್‌ಪೌಡರ್‌ನ ಸ್ಫೋಟವು ವೇಗವಾಗಿ ಚಲಿಸುವ ಶಕ್ತಿಯನ್ನು ನೀಡುತ್ತದೆ. ಸ್ಫೋಟಿಸಿದಾಗ 6 ಬ್ಲೇಡ್‌ಗಳ ಸೆಟ್ ಬಿಡುಗಡೆಯಾಗುತ್ತದೆ.

ಇದು ಆ ಗುರಿಯನ್ನು ಮಾತ್ರ ಹಾನಿಗೊಳಿಸುತ್ತದೆ. ಈ ಕ್ಷಿಪಣಿಯನ್ನು ಅಮೆರಿಕದಲ್ಲಿರುವ 8 ಬಗೆಯ ಹೆಲಿಕಾಪ್ಟರ್‌ಗಳಿಂದ ಉಡಾವಣೆ ಮಾಡಬಹುದು. ಇದನ್ನು 7 ವಿವಿಧ ರೀತಿಯ ವಿಮಾನಗಳು, ಪೆಟ್ರೋಲ್ ದೋಣಿ ಅಥವಾ ಹುಮಾವಿಯಿಂದ ಕೂಡ ಹಾರಿಸಬಹುದು. ಆರ್‌9ಎಕ್ಸ್ ಹೆಲ್‌ಫೈರ್ ಕ್ಷಿಪಣಿ ಬೆಂಕಿಯಲ್ಲಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಬಲವಾದ ಬಂಕರ್‌ಗಳು, ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್‌ಗಳು ಮತ್ತು ದಪ್ಪವಾದ ಕಾಂಕ್ರೀಟ್ ಗೋಡೆಗಳನ್ನು ಒಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!