Sunday, December 10, 2023

Latest Posts

ಕೇರಳದ ಬಾಂಬ್ ಸ್ಫೋಟ ಪ್ರಕರಣ: ನ.29ರ ವರೆಗೆ ಆರೋಪಿ ಮಾರ್ಟಿನ್‌ ಗೆ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ಕಳಮಶೇರಿಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿ ಡೊಮ್ನಿಕ್ ಮಾರ್ಟಿನ್ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಡೊಮ್ನಿಕ್ ಮಾರ್ಟಿನನ್ನು ನವೆಂಬರ್ 29ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ. 12 ವರ್ಷದ ಬಾಲಕಿ ಸೇರಿ ಮೂವರು ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಶಂಕಿತ ಆರೋಪಿ ಡೊಮ್ನಿಕ್ ಮಾರ್ಟಿನ್ ಪೊಲೀಸರಿಗೆ ಶರಣಾಗಿದ್ದನು.

ಡೊಮ್ನಿಕ್ ಮಾರ್ಟಿನನ್ನು ಎರ್ನಾಕುಳಂ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಡೊಮ್ನಿಕ್ ದಾಳಿ ಹಿಂದಿನ ರೂವಾರಿ ಅನ್ನೋದು ಪತ್ತೆಯಾಗಿದೆ. ಆದರೆ ನೀಲಿ ಬಣ್ಣದ ಕಾರು ಸೇರಿದಂತೆ ಹಲವು ಅನುಮಾನಗಳು ಹಾಗೇ ಉಳಿದುಕೊಂಡಿದೆ. ಕೇಂದ್ರ ತನಿಖಾ ತಂಡಗಳು ಪ್ರಕರಣದ ತನಿಖೆ ನಡೆಸುತ್ತಿದೆ.

ಝಮ್ರಾ ಇಂಟರ್‌ ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ 2500ಕ್ಕೂ ಹೆಚ್ಚು ಜನರು ಸಾಮೂಹಿಕ ಪ್ರಾರ್ಥನೆ ಮಾಡುವ ವೇಳೆ ಬಾಂಬ್ ಸ್ಫೋಟಗೊಂಡಿತ್ತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!