ದಿಗಂತ ವರದಿ ಕಲಬುರಗಿ:
ರಾಜ್ಯದಲ್ಲಿ ಬಿಜೆಪಿ ಸಕಾ೯ರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ನಿಂತು ಹೋಗಿದ್ದು, ಕೇವಲ ಭ್ರಷ್ಟಾಚಾರದಲ್ಲೆ ಕಾಲ ಕಳೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖಗೆ೯ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ,ಕೇಂದ್ರ ಸಕಾ೯ರಕ್ಕೆ ರಾಜ್ಯದ ಬಗ್ಗೆ ಅಲಜಿ೯ ಇದೆ. ಅದೇ ತರಹ ರಾಜ್ಯ ಸರಕಾರಕ್ಕೆ ಕಲ್ಯಾಣ ಕನಾ೯ಟಕ ಭಾಗದ ಬಗ್ಗೆ ಅಲಜಿ೯ ಇದೆ. ಕೆಕೆಆರಡಿಬಿ ಅಧ್ಯಕ್ಷ ಸ್ಥಾನವನ್ನು ದುಬ೯ಗೊಳಿಸಲು ಸರಕಾರ ಯತ್ನ ಮಾಡುತ್ತಿದ್ದು, ಡಬಲ್ ಇಂಜಿನ್ ಸಕಾ೯ರ ಬಂದಾಗಿನಿಂದ ಈ ಭಾಗದ ಯೋಜನೆಗಳು ಮಾಯವಾಗಿವೆ ಎಂದರು.
ರೈತರಿಗೆ ಇದುವರೆಗೂ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. 50 ವಷ೯ದಲ್ಲಿ ಉಂಟಾಗದ ನಿರುದ್ಯೋಗ ಸಮಸ್ಯೆ, ಇಂದಿನ ಸರಕಾರದಲ್ಲಿ ಹೆಚ್ಚಾಗಿದೆ ಎಂದರು.
ಕಲ್ಯಾಣ ಕನಾ೯ಟಕ ಭಾಗಕ್ಕೆ ಉದ್ಯೋಗ ಕಲ್ಪಿಸುವ ಯೋಜನೆಗಳು ಬಂದಿಲ್ಲ. ಕದ್ದಿಮುಚ್ಚಿ ಈ ಭಾಗದ ಯುವಕರ ಉದ್ಯೋಗದ ಭವಿಷ್ಯ ಕತ್ತಲೆಡೆ ಒಯ್ಯುತ್ತಿದ್ದಾರೆ ಎಂದು ದೂರಿದರು. ಕ್ಯಾಬಿನೆಟ್ ಸಬ್ ಕಮಿಟಿಯ ಅನುಮತಿ ಪಡೆಯದೇ, ಸಕಾ೯ರದಿಂದ ಸುತ್ತೋಲೆ ಹೇಗೆ ಬರುತ್ತಿವೆ ಎಂದು ಪ್ರಶ್ನಿಸಿದರು. ಸಚಿವ ಬಿ.ಶ್ರೀರಾಮುಲು ಅವರಿಗೆ 371(ಜೆ) ಬಗ್ಗೆ ಗಂಧ-ಗಾಳಿಯೂ ಗೊತ್ತಿಲ್ಲ. ಬಿಜೆಪಿಯ ವಿಧಾನ ಸಭೆ ಸದಸ್ಯರು ಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ ಎಂದು ಹರಿಹಾಯ್ದರು.
ಪಿಎಸ್ಐ ನೇಮಕಾತಿ ಪಟ್ಟಿಯನ್ನು ರದ್ದುಪಡಿಸುವಂತೆ ಆಗ್ರಹ: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು,ಕೂಡಲೇ ಪಿಎಸ್ ಐ ನೇಮಕಾತಿ ಪಟ್ಟಿಯನ್ನು ರದ್ದುಪಡಿಸುವಂತೆ ಸರಕಾರಕ್ಕೆ ಆಗ್ರಹ ಮಾಡಿದರು. 40% ಸಕಾ೯ರದಿಂದ ಪಿಎಸ್ಐ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಪೋಲಿಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಖುದ್ದು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದರು.
ಪಿಎಸ್ಐ ನೇಮಕಾತಿ, ವಗಾ೯ವಣೆ,ಅಕ್ರಮ ಮರಳುಗಾರಿಕೆ, ಗಾಂಜಾ ಸಾಗಾಟ ಸೇರಿದಂತೆ ಪ್ರತಿಯೊಂದರಲ್ಲು ಸಕಾ೯ರ ಎಂಜಲು ಕಾಸು ಪಡೆಯುತ್ತಿದೆ ಎಂದು ಆರೋಪಿಸಿದರು. ಕೊರೋನಾದಿಂದ ಆಥಿ೯ಕ ನಷ್ಟದ ನೆಪವೊಡ್ಡಿ ಸಕಾ೯ರ, ಕಲ್ಯಾಣ ಕನಾ೯ಟಕ ಭಾಗದ ಹುದ್ದೆಗಳ ಭತಿ೯ಗೆ ತಡೆ ಹಿಡಿದಿದೆ.ಕೇವಲ ಕಲ್ಯಾಣ ಕನಾ೯ಟಕ ಭಾಗದಲ್ಲಿ ಮಾತ್ರ ಸರಕಾರಕ್ಕೆ ಆಥಿ೯ಕ ಸಂಕಷ್ಟ ಇದೆಯಾ ಎಂದು ಪ್ರಶ್ನಿಸಿದರು.
ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಈ ಭಾಗದ ಅಭ್ಯಥಿ೯ಗಳಿಗೆ ಅನ್ಯಾಯವಾಗಿದ್ದು, 371(ಜೆ) ಮಾನದಂಡಗಳನ್ನು ನೇಮಕಾತಿಯಲ್ಲಿ ಸರಿಯಾಗಿ ಅನುಸರಿಸುತ್ತಿಲ್ಲ ಎಂದರು. ಈ ಭಾಗದ 45 ಪಿಎಸ್ಐ ಅಭ್ಯರ್ಥಿ ಗಳಿಗೆ ಅನ್ಯಾಯವಾಗಿದೆ. ಸರಕಾರದ ಅವಿವೇಕಿತನದಿಂದ ನಮ್ಮ ಭಾಗದ ಜನರಿಗೆ ನಿರಂತರ ಅನ್ಯಾಯವಾಗುತ್ತಿದ್ದು, ಖಂಡನೀಯ ವಿಷಯವಾಗಿದೆ ಎಂದರು.