ಒಗ್ಗಟ್ಟಿನಿಂದ ಸಮಾಜದ ಬೆಳವಣಿಗೆ ಸಾಧ್ಯ: ಈರಣ್ಣಾ ಗೊಳೆದ

ಹೊಸದಿಗಂತ ವರದಿ ಕಲಬುರಗಿ: 

ವಿಜಯದಶಮಿ ಹಬ್ಬದ ಪ್ರಯುಕ್ತ ವೀರಶೈವ ಲಿಂಗಾಯತ ಬಂದು ಸಮಾಜ ಶಹಾಬಜಾರ್ ವತಿಯಿಂದ ಬನ್ನೀ ಮುರಿಯುವ ಕಾಯ೯ಕ್ರಮವು ನಗರದ ಶಹಾಬಜಾರ್ ಬಡಾವಣೆಯಲ್ಲಿ ಬುಧವಾರ ಜರುಗಿತು. ನಗರದ ಶಹಾಬಜಾರ್ ಮರಗಮ್ಮಾ ದೇವಸ್ಥಾನದಲ್ಲಿ ಶಸ್ತ್ರಾಸ್ತ್ರಗಳನ್ನು ಪೂಜೆ ಮಾಡುವ ಮೂಲಕ ಸಮಾಜದ ಮುಖಂಡರು ಬನ್ನಿ ಮುರಿಯುವ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.

ನಂತರ ಪಾದಯಾತ್ರೆ ಮೂಲಕ ಸುವರ್ಣ ನಗರದ ಹನುಮಾನ ಮಂದಿರಕ್ಕೆ ತೆರಳಿ, ಬನ್ನೀ ಗಿಡಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಕಾಯ೯ದಶಿ೯ ಈರಣ್ಣಾ ಗೊಳೆದ, ಪುರಾತನ ಕಾಲದಿಂದಲೂ ನಮ್ಮ ಹಿರಿಯರು ವಿಜಯದಶಮಿ ಹಬ್ಬದ ದಿನದಂದು ಬನ್ನೀ ಮುರಿಯುವ ಮೂಲಕ ಸಮಾಜವನ್ನು ಒಗ್ಗೂಡಿಸವುದು ಪ್ರಮುಖವಾಗಿದೆ.ಪರಸ್ಪರ ಸಂಬಂಧ ಗಟ್ಟಿಯಾಗಿರಬೇಕೆಂದರೆ,ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮೆಲ್ಲರ ಮಧ್ಯೆ ಮೂಡಬೇಕೆಂದರು. ಇದೇ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಶರಣಬಸಪ್ಪಾ ರೇವೂರೆ,ಹಿರಿಯರಾದ ಮಲ್ಲಿಕಾರ್ಜುನ ಖೇಮಜಿ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೇವಣಸಿದ್ದಪಾ ಹಂಗರಗಿ, ಶಿವಾನಂದ ಬಂಡಕ್,ಮಲ್ಲಿಕಾರ್ಜುನ ಓಕಳಿ,ಶಂಕರ ಜಾಧವ,ಅರವಿಂದ್ ಶೀಲವಂತ,ಸುಭಾಷ್ ಟೈಲರ್,ಖಜಾಂಚಿ ಸೂಯ೯ಕಾಂತ ಡೆಂಗಿ,ಸುಭಾಷ್ ಹೊದಲೂರ,ಶಾಂತಕುಮಾರ ಖೇಮಜಿ,ವಿಜಯಕುಮಾರ್ ಮುನ್ನೋಳ್ಳಿ, ಶಾಂತಕುಮಾರ ಬಿರಾದಾರ, ಜಗದೀಶ್ ಗೊಳೆದ,ಶಿವಕುಮಾರ್ ಹಂಗರಗಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!