ಭದ್ರತಾ ವಾಹನ ಸೌಲಭ್ಯ ನಿರಾಕರಿಸಿ ಸರಳತೆ ಮೆರೆದ ಫಡ್ನವೀಸ್‌ ಪತ್ನಿ ಅಮೃತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ತಮ್ಮ ಭದ್ರತೆಯ ಭಾಗವಾಗಿ ನೀಡಲಾಗಿದ್ದ ಟ್ರಾಫಿಕ್ ಕ್ಲಿಯರೆನ್ಸ್ ಪೈಲಟ್ ವಾಹನವನ್ನು ನಯವಾಗಿ ತಿರಸ್ಕರಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ನಾನು ಮುಂಬೈನ ಸಾಮಾನ್ಯ ಪ್ರಜೆಯಂತೆ ಬದುಕಲು ಬಯಸುತ್ತೇನೆ. ನನಗೆ ಟ್ರಾಫಿಕ್ ಕ್ಲಿಯರೆನ್ಸ್ ಪೈಲಟ್ ವಾಹನವನ್ನು ನೀಡದಂತೆ ನಾನು ಮುಂಬೈ ಪೊಲೀಸರನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಮುಂಬೈನಲ್ಲಿ ಟ್ರಾಫಿಕ್ ಸ್ಥಿತಿಯು ನಿರಾಶಾದಾಯಕವಾಗಿದೆ ಆದರೆ ಏಕ್‌ ನಾಥ್‌ ಶಿಂದೆ ಹಾಗೂ ದೇವೇಂದ್ರ ಫಡ್ನಾವೀಸ್‌ ಅವರ ಸರ್ಕಾರವು ಇದಕ್ಕೆ ಶೀಘ್ರವೇ ಪರಿಹಾರ ರೂಪಿಸಲಿದೆ ಎಂಬ ಖಚಿತ ವಿಶ್ವಾಸ ತಮಗಿದೆ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹಚರರಿಂದ ಬೆದರಿಕೆಯ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಇಲಾಖೆಯು ಅಮೃತಾ ಫಡ್ನವಿಸ್ ಮತ್ತು ನಟ ಸಲ್ಮಾನ್ ಖಾನ್ ಅವರಿಗೆ Y+ ಭದ್ರತೆಯನ್ನು ಅನುಮೋದಿಸಿತ್ತು. ಈ ಭದ್ರತೆಯ ಭಾಗವಾಗಿ ನೀಡಲಾಗುವ ಬೆಂಗಾವಲು ವಾಹನವು ರಕ್ಷಣೆ ಪಡೆದವರ ಪ್ರಯಾಣದ ಸಮಯದಲ್ಲಿ  ರಸ್ತೆ ಸಂಚಾರವನ್ನು ತೆರವುಗೊಳಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!