ಸ್ಟಾರ್‌ ಮ್ಯೂಸಿಕ್‌ ಡೈರೆಕ್ಟರ್ ದೇವಿಶ್ರೀ‌ಗೆ ಅಪರೂಪದ ಗೌರವ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ರಾಕಿಂಗ್ ಮ್ಯೂಸಿಕ್‌ ಡೈರೆಕ್ಟರ್‌ ದೇವಿ ಶ್ರೀ ಪ್ರಸಾದ್ ಬಗ್ಗೆ ಹೇಳಬೇಕಾಗಿಲ್ಲ. ತಮ್ಮ ಸಂಗೀತದಿಂದ ಮಾಸ್‌ ಮತ್ತು ಕ್ಲಾಸ್ ಪ್ರೇಕ್ಷಕರನ್ನು ರಂಜಿಸುತ್ತಾರೆ. ದೇವಿ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ದೇವಿಶ್ರೀ, ಗಾಯಕರಾಗಿ, ಗೀತರಚನೆಕಾರರಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸೌತ್ ನಲ್ಲಿ ಹಲವು ಸ್ಟಾರ್ ಹೀರೋಗಳ ದೃಶ್ಯಗಳಿಗೆ ಸಂಗೀತ ನೀಡಿರುವ ದೇವಿಶ್ರೀ, ಬಾಲಿವುಡ್ ನಲ್ಲೂ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಅವರು ಪುಷ್ಪ 1 ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಂಗೀತ ನಿರ್ದೇಶಕರಾದರು.

ಉ ಅಂಟಾವ ಉಹೂ ಅಂಟಾವಾ ಹಾಡುಗಳ ಮೂಲಕ ನಾಡಿನ ಎಲ್ಲರೂ ಹೆಜ್ಜೆ ಹಾಕುವಂತೆ ಮಾಡಿದರು. ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಗಾಯಕರೂ ಈ ಸಂಗೀತಕ್ಕೆ ಅಡಿಕ್ಟ್ ಆಗಿದ್ದಾರೆ. ಈಗ ಅವರು ಪುಷ್ಪ 2ಕ್ಕೆ ಯಾವ ಟ್ಯೂನ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇದೇ ವೇಳೆ ದೇವಿಶ್ರೀ ಪ್ರಸಾದ್ ಅವರಿಗೆ ಅಪರೂಪದ ಗೌರವವೊಂದು ಲಭಿಸಿದೆ. ಪ್ರತಿಷ್ಠಿತ ಲೆಜೆಂಡರಿ ಅಂತರಾಷ್ಟ್ರೀಯ ಸಂಗೀತ ಮ್ಯಾಗಜಿನ್ ರೋಲಿಂಗ್ ಸ್ಟೋನ್ ನ ಕವರ್ ಪೇಜ್ ನಲ್ಲಿ ದೇವಿಶ್ರೀ ಪ್ರಸಾದ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

“ತಮ್ಮ ಸಂಗೀತ ಶೈಲಿ ಮತ್ತು ಚಾರ್ಟ್ ಬಸ್ಟರ್ ಹಿಟ್‌ಗಳ ಮೂಲಕ ವಿಶ್ವಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳನ್ನು ಗಳಿಸಿರುವ ದೇವಿ ಶ್ರೀ ಪ್ರಸಾದ್… ಈ ತಿಂಗಳು ನಮ್ಮ ಮ್ಯಾಗಜೀನ್‌ನ ಪುಟವನ್ನು ಕವರ್ ಮಾಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!