ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಅರಮನೆ ಮೈದಾನದಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳು ನಡಿಗೆ ತಾಲೀಮು ನಡೆಸುತ್ತಿವೆ.
ಇಂದು ಬೆಳಗ್ಗೆ 750 ಕೆ.ಜಿ.ಭಾರ ಹೊತ್ತು ಕ್ಯಾಪ್ಟನ್ ಧನಂಜಯ ಆನೆ ರಸ್ತೆಗಿಳಿದಿದೆ. ಅರಮನೆ ಮೈದಾನದಿಂದ ಬನ್ನಿಮಂಟಪದವರೆಗೆ ಹೆಜ್ಜೆ ಹಾಕಿದೆ. ಧನಂಜಯನನ್ನು ಹಿಂಬಾಲಿಸಿ ಒಟ್ಟು ಹದಿನಾಲಕು ಆನೆಗಳು ರಸ್ತೆಯಲ್ಲಿ ಸಾಗಿದವು.