ಪಂಚಮಸಾಲಿ ಹೋರಾಟ: ಸೆ.19 ರಂದು ಹಾವೇರಿ ಜಿಲ್ಲೆಯಲ್ಲಿನ ಸಿಎಂ ನಿವಾಸದ ಎದುರು ಧರಣಿ

ದಿಗಂತ ವರದಿ ವಿಜಯಪುರ:

ಪಂಚಮಸಾಲಿ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದನೆ ನೀಡದ ಹಿನ್ನೆಲೆ ಸೆ.19 ರಂದು ಹಾವೇರಿ ಜಿಲ್ಲೆಯಲ್ಲಿನ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಶಂಕರಗೌಡ ಬಿರಾದಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಸರ್ಕಾರ ಕಾಲ ಹರಣ ಮಾಡುತ್ತಿದೆ. ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಹೀಗಾಗಿ
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಮುಂದೆ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು.

ಇನ್ನು ರಾಜ್ಯದ ಪಂಚಮಸಾಲಿ ಮುಖಂಡರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಬಿ.ಎಂ. ಪಾಟೀಲ ದೇವರಹಿಪ್ಪರಗಿ, ನಿಂಗನಗೌಡ ಸೊಲ್ಲಾಪುರ, ಶ್ರೀಶೈಲ ಬುಕ್ಕಣಿ, ಪ್ರಶಾಂತ ಮುಂಜಾನೆ, ದಯಾನಂದ ಜಾಲಗೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!