ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ವಿಸ್ಟ್: ಮತದಾನದಲ್ಲಿ ಅವ್ಯವಹಾರ ನಡೆದಿದೆ ಎಂದು ತರೂರ್ ಬಣ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ನಡೆಯುತ್ತಿದೆ. ಅಧ್ಯಕ್ಷ ಗದ್ದುಗೆಗೆ ಯಾರು ಏರಲಿದ್ದಾರೆ ಎಂಬ ಉತ್ಸುಕತೆ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಬಹಿರಂಗವಾಗಲಿರುವ ಸಮಯದಲ್ಲಿ ಶಶಿ ತರೂರ್ ಬಣ ಗಂಭೀರವಾದ ಆರೋಪ ಮಾಡಿದೆ. ಮತದಾನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಶಶಿ ತರೂರ್ ಬಣ ಕೇಂದ್ರ ಚುನಾವಣಾ ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ಕೆಲವು ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಅಂತಹ ರಾಜ್ಯಗಳ ಮತಗಳನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಅಕ್ರಮಗಳು ನಡೆದಿವೆ ಎಂದು ತರೂರ್ ಪಾಳಯ ಹೇಳಿಕೊಂಡಿದೆ ಎಂದು ವರದಿಯಾಗಿದೆ. ಪ್ರಾಧಿಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಮತದಾನ ಮುಗಿದ ನಂತರ ಮತಪೆಟ್ಟಿಗೆಗಳಿಗೆ ಸೀಲು ಹಾಕಲಾಗಿಲ್ಲ ಎಂದು ತರೂರ್ ಬಣ ಆರೋಪಿಸಿದೆ. ಎರಡು ರಾಜ್ಯಗಳಲ್ಲಿ ಮತದಾನದ ದಿನದಂದು ಕೆಲವರು ಪಿಸಿಸಿ ಪ್ರತಿನಿಧಿಗಳು ಗುರುತಿನ ಚೀಟಿಗಳನ್ನು ವಿತರಿಸಿ, ಮತ್ತು ತರೂರ್ ಅವರ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ನೀಡುವಂತೆ ಬಹಿರಂಗವಾಗಿ ಕೇಳಿದ್ದಾರೆ ಎಂದು ತರೂರ್ ಬಣ ಹೇಳಿಕೊಂಡಿದೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಶಿ ತರೂರ್ ಬಣದ ಆರೋಪವನ್ನು ಚುನಾವಣಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅವು ಕೇವಲ ಕ್ಷುಲ್ಲಕ ಆರೋಪಗಳಾಗಿದ್ದು, ಇಬ್ಬರು ಅಭ್ಯರ್ಥಿಗಳ ಮತಗಟ್ಟೆ ಏಜೆಂಟರ ಒಪ್ಪಿಗೆಯೊಂದಿಗೆ ಮತಪೆಟ್ಟಿಗೆಗಳಿಗೆ ಸೀಲು ಹಾಕಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಬಾಕ್ಸ್‌ಗಳಿಗೆ ಸಹಿ ಮಾಡಿದ್ದು ಮಾತ್ರವಲ್ಲದೆ ನ್ಯಾಯಯುತವಾಗಿ ಚುನಾವಣೆ ನಡೆಸಿದ ಚುನಾವಣಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!