ಚೆನ್ನೈಗೆ ಆಸರೆಯಾದ ಧೋನಿ: ಕೋಲ್ಕತ್ತಾಕ್ಕೆ 132 ರನ್​ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಐಪಿಎಲ್​ 15 ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ 5 ವಿಕೆಟ್​ ನಷ್ಟಕ್ಕೆ 131 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಜಡೇಜಾ ಪಡೆ ಆರಂಭಿಕ ಹೀರೋ ಋತುರಾಜ್​ ಗಾಯಕ್ವಾಡ್​(0) ಮೊದಲ ಓವರ್​ನ ಮೂರನೇ ಎಸೆತದಲ್ಲೇ ಡಕೌಟ್​ ಆದರು. ಇದರ ಬೆನ್ನಲ್ಲೇ ಡೆವೋನ್​ ಕಾನ್ವಾಯ್​(3) ಕೂಡ ಪೆವಿಲಿಯನ್​ ಸೇರಿದರು.
ಬಳಿಕ ಕ್ರೀಸ್​ಗಿಳಿದ ರಾಬಿನ್​ ಉತ್ತಪ್ಪ(28), ಅಂಬಾಟಿ ರಾಯುಡು(15) ರನ್​ ಗಳಿಸಿ ತಂಡಕ್ಕೆ ನೆರವಾದರು. ಶಿವಂ ದುಬೆ(3)ಬಂದಷ್ಟೇ ವೇಗವಾಗಿ ವಾಪಸಾದರು.
ತಂಡದ ಬ್ಯಾಟಿಂಗ್​ ಬಲವಾಗಿರುವ ಯುವಕರು ಪೆವಿಲಿಯನ್​ ಪರೇಡ್​ ನಡೆಸುತ್ತಿದ್ದರೆ,ಧೋನಿ 7 ಬೌಂಡರಿ 1 ಸಿಕ್ಸರ್​ ಸಮೇತ ಬರೋಬ್ಬರಿ 50 ರನ್​ ಗಳಿಸಿದರು.ರವೀಂದ್ರ ಜಡೇಜಾ 26 ರನ್​ ಗಳಿಸಿ ಧೋನಿಗೆ ಸಾಥ್​ ನೀಡಿದರು. ಅಂತಿಮವಾಗಿ ಸಿಎಸ್​ಕೆ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 131 ರನ್​ ಗಳಿಸಿತು.
ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಉಮೇಶ್​ ಯಾದವ್​ 2, ವರುಣ್​ ಚಕ್ರವರ್ತಿ, ಆಂಡ್ರೆ ರಸೆಲ್​ ತಲಾ ಒಂದು ವಿಕೆಟ್​ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!