IPL | ಮತ್ತೆ ಧೋನಿಯ ಅದ್ಭುತ ಸ್ಟಂಪಿಂಗ್: ಸಾಲ್ಟ್ ಬಿಗ್ ಇನ್ನಿಂಗ್ಸ್ ಗೆ ಹಾಕಿದ್ರು ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಬೌಂಡರಿ-ಸಿಕ್ಸರ್ ಮೂಲಕ ರನ್ ವೇಗವನ್ನು ಹೆಚ್ಚಿಸಲು ಮುಂದಾಗಿದ್ದರು. ಈ ಸಂದರ್ಭ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಫಿಲ್ ಸಾಲ್ಟ್ ಅವರನ್ನು ಧೋನಿ ಸ್ಟಂಪ್ ಔಟ್ ಮಾಡಿದರು.

16 ಎಸೆತಗಳಲ್ಲಿ 32 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಫಿಲ್ ಸಾಲ್ಟ್ ಅವರು ಬಿಗ್ ಇನ್ನಿಂಗ್ಸ್ ಆಡುವ ಮುನ್ಸೂಚನೆ ನೀಡಿದ್ದರು. ಈ ವೇಳೆ ನೂರ್ ಅಹ್ಮದ್ ಎಸೆದ ಆಫ್ ಸೈಡ್ ಎಸತವನ್ನು ವಿಕೆಟ್ ಹಿಂದೆ ನಿಂತಿದ್ದ ಧೋನಿ ಕ್ಷಣ ಮಾತ್ರದಲ್ಲಿ ಸ್ಟಂಪ್ ಎಗರಿಸಿದರು. ಕ್ರಿಸ್ ಸಮೀಪದಲ್ಲೇ ಇದ್ದ ಸಾಲ್ಟ್ ಔಟ್ ಧೋನಿಯ ವೇಗದ ಸ್ಟಂಪಿಂಗ್‌ಗೆ ಬಲಿಯಾದರು.

https://x.com/repivxx65_/status/1905628613627838885?ref_src=twsrc%5Etfw%7Ctwcamp%5Etweetembed%7Ctwterm%5E1905628613627838885%7Ctwgr%5E883762ea2f03b6aef2a6e9a2df37641623e3bea7%7Ctwcon%5Es1_&ref_url=https%3A%2F%2Fkannada.news18.com%2Fnews%2Fsports%2Fdhoni-lightning-stumping-phil-salt-out-fans-celebrate-ddr-2036302.html

ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕೇವಲ 0.13 ಸೆಕೆಂಡ್‌ನಲ್ಲಿ ಸ್ಟಂಪ್ ಔಟ್ ಮಾಡಿದ್ದರು ಧೋನಿ. ಇಂದಿನ ಪಂದ್ಯದಲ್ಲಿ ಸಾಲ್ಟ್ ಅವರನ್ನು ಅದಕ್ಕಿಂತಲೂ ವೇಗವಾಗಿ ಔಟ್ ಮಾಡಿ ಅಚ್ಚರಿ ಮೂಡಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!