ಧೋನಿ ಹಿಡಿದ ಆ ಒಂದು ಕ್ಯಾಚ್​​​ ಗೆ ಕ್ರಿಕೆಟ್​ ಲೋಕವೇ ಫಿದಾ: ಚಿರತೆ ವೇಗಿ ಅಂದ್ರು MSD ಫ್ಯಾನ್ಸ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್ ಕೆ 63 ರನ್ ಗಳ ಜಯ ಸಾಧಿಸಿತ್ತು. ಇದೀಗ ನಿನ್ನೆಯ ಪಂದ್ಯದಲ್ಲಿ ಎಂಎಸ್ ಧೋನಿ ಹಿಡಿದ ಕ್ಯಾಚ್ ಸಂಚಲನ ಮೂಡಿಸಿದೆ.

ಗುಜರಾತ್ ಟೈಟಾನ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಗುಜರಾತ್ ತಂಡ 7.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿತು.

ಮಿಚೆಲ್ ಎಸೆದ ಬಾಲ್ ಗೆ ಶಂಕರ್ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ಮರಳಿದರು. ಆದರೆ ಧೋನಿ ಹಿಡಿದ ಕ್ಯಾಚ್ ಅದ್ಭುತವಾಗಿ ಮೂಡಿಬಂದಿದೆ. ಧೋನಿ ಚೆಂಡನ್ನು ಹುಲಿಯಂತೆ ಹಾರಿ ಹಿಡಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಧೋನಿಗೆ 42 ವರ್ಷ ಆಗಿದ್ರು ಇನ್ನು ಅದೇ ಫಿಟ್ ಮತ್ತು ಪವರ್ ನಲ್ಲಿ ಫೀಲ್ಡಿಂಗ್ ಮಾಡುವ ವೈಖರಿ ಸಕತ್ ಥ್ರಿಲ್ ಆಗಿದೆ ಎಂದಿದ್ದಾರೆ ಫ್ಯಾನ್ಸ್.

ನಿನ್ನೆಯ ಪಂದ್ಯದಲ್ಲಿ ಮೊದಲು ಬಂದ ಸಿಎಸ್ ಕೆ ಆರು ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತ್ತು. ಈ ಗುರಿಯನ್ನು ಸಾಧಿಸದ ಗುಜರಾತ್ ತಂಡ 143 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!