ವಿಶ್ವದ ಪ್ರಬಲ ವಿಮಾ ಬ್ರಾಂಡ್ ಪಟ್ಟಿಯಲ್ಲಿ ಎಲ್‌ಐಸಿಗೆ ಮೊದಲ ಸ್ಥಾನ: ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ ರಿಪೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 9.8 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯಗಳೊಂದಿಗೆ ಭಾರತೀಯ ಜೀವ ವಿಮಾ ನಿಗಮವು ವಿಶ್ವದ ಅತ್ಯಂತ ಪ್ರಬಲ ವಿಮಾ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ.

‘ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ 100 2024’ ಬಿಡುಗಡೆಗೊಳಿಸಿರುವ ವರದಿಯಲ್ಲಿ ಈ ಮಾಹಿತಿಗಳಿದ್ದು, ಎಲ್‌ಐಸಿ ಬ್ರಾಂಡ್ ಸಾಮರ್ಥ್ಯ ಸೂಚ್ಯಂಕ ಸ್ಕೋರ್‌ನಲ್ಲಿ 88.3 ಪಡೆದಿದೆ ಎಂದು ವರದಿ ಹೇಳಿದೆ.

ಚೀನಾ ಮೂಲದ ಕ್ಯಾಥೆ ಲೈಫ್ ಇನ್ಶೂರೆನ್ಸ್ ನಂತರದ ಸ್ಥಾನದಲ್ಲಿದ್ದು, ತನ್ನ ಬ್ರಾಂಡ್ ಮೌಲ್ಯದಲ್ಲಿ ಶೇಕಡಾ 9 ರಷ್ಟು ಏರಿಕೆ ದಾಖಲಿಸಿ 4.9 ಬಿಲಿಯನ್ ಡಾಲರ್‌ನಲ್ಲಿದೆ. ಮೂರನೇ ಸ್ಥಾನದಲ್ಲಿ ಎನ್‌ಆರ್‌ಎಂಎ ಇನ್ಶೂರೆನ್ಸ್ ಬ್ರಾಂಡ್ ಇದ್ದು, ಇದೂ ಕೂಡಾ ತನ್ನ ಮೌಲ್ಯದಲ್ಲಿ ಶೇಕಡಾ 82 ರಷ್ಟು ಏರಿಕೆ ದಾಖಲಿಸಿ 1.3 ಬಿಲಿಯನ್ ಡಾಲರ್‌ಗೆ ಮುಟ್ಟಿದೆ ಎಂದು ವರದಿ ಹೇಳಿದೆ.

ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ ವರದಿಯ ಪ್ರಕಾರ ಜಾಗತಿಕವಾಗಿ ಪ್ರಬಲ ವಿಮಾ ಬ್ರಾಂಡ್ ಪಟ್ಟಿಯಲ್ಲಿ ಎಲ್‌ಐಸಿ ಮೊದಲ ಸ್ಥಾನ ಪಡೆದಿರುವುದು ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಾಂತಿ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!