ಧೂಮ್‌ ಸಿನಿಮಾ ನಿರ್ದೇಶಕ ಸಂಜಯ್‌ ಗಧ್ವಿ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ʼಧೂಮ್‌ʼ ನಿನಿಮಾ ಮೂಲಕ ಹೆಚ್ಚು ಖ್ಯಾತಿ ಪಡೆದ ನಿರ್ದೇಶಕ ಸಂಜಯ್ ಗಧ್ವಿ (57) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಮುಂಬೈನ ಲೋಖಂಡವಾಲಾದಲ್ಲಿ ಸಂಜಯ್‌ ಬೆಳಗ್ಗೆ ವಾಕಿಂಗ್‌ ಮಾಡುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

2000ರಲ್ಲಿ ʼತೇರೆ ಲಿಯೆʼ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಡಿದ್ದರು. 2004ರಲ್ಲಿ ಬಿಡುಗಡೆಯಾದ ಧೂಮ್‌ ಮತ್ತು 2006ರಲ್ಲಿ ಬಿಡುಗಡೆಯಾದ ಧೂಮ್‌ 2 ಮೂಲಕ ಇನ್ನಷ್ಟು ಖ್ಯಾತ ಪಡೆದಿದ್ದರು.

ಸಂಜಯ್‌ ಗಧ್ವಿ ನಿಧನಕ್ಕೆ ಬಾಲಿವುಡ್‌ ಗಣ್ಯರು, ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!