HEALTH| ಆರೋಗ್ಯ ಸುಧಾರಣೆಗಾಗಿ ಹಬೆ ನಿಮ್ಮ ನಿತ್ಯದ ದಿನಚರಿಯಲ್ಲಿರಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾತಾವರಣ ಬದಲಾಗಿದ್ದು, ಶೀತ ಹವೆ ಆರಂಭವಾಗಿದೆ. ಜೊತೆಗೆ ಪರಿಸರದಲ್ಲಿ ಮಾಲಿನ್ಯವೂ ಹೆಚ್ಚಾಗಿದೆ. ಧೂಳಿನಂಶ, ಹೊಗೆಯಂಶ ಹೆಚ್ಚಾಗಿದ್ದು ಇದರಿಂದಾಗಿ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಅತಿಯಾಗಿದೆ. ಕಲುಷಿತ ಗಾಳಿಯಿಂದ ಅನೇಕ ರೋಗಗಳು ಉಂಟಾಗುವ ಸಾಧ್ಯತೆಯಿದೆ. ಶೀತ, ಕಫ, ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗುತ್ತವೆ. ಇದಕ್ಕೆ ಕೆಲವೊಂದು ಅಂಶಗಳನ್ನು ದಿನ ನಿತ್ಯ ಅಳವಡಿಸಿಕೊಂಡರೆ ಆರೋಗ್ಯ ಸುಸ್ಥಿತಿಯಲ್ಲಿಡಬಹುದು.

ಮನೆಯಲ್ಲಿಯೆ ಮಾಡಬಹುದಾದ ಈ ಕ್ರಿಯೆ ನಮ್ಮ ದೇಹಾರೋಗ್ಯ ಉತ್ತಮವಾಗಿರಲು ಸಹಾಯಕವಾಗಿದೆ. ಶುದ್ಧವಾದ ಬಿಸಿ ಬಿಸಿ ನೀರನ್ನು ಬಳಸಿ ಹಬೆ ತೆಗೆದುಕೊಂಡರೆ ದೇಹ ಆರೋಗ್ಯವಂತವಾಗಿರುತ್ತದೆ. ಶೀತ, ಕೆಮ್ಮು, ನೆಗಡಿಯಿಂದ ನಮ್ಮನ್ನು ಕಾಪಾಡಲೂ ಸಹಕಾರಿಯಾಗುತ್ತದೆ.

ಗಂಟಲು ಕಿರಿಕಿರಿ, ಗಂಟಲು ನೋವು, ಗಂಟಲಲ್ಲಿ ಏನೊ ಸಿಲುಕಿದಂತಾಗುವ ಸಮಸ್ಯೆ ಹೆಚ್ಚಾಗಿದೆ. ಕಫದ ಸಮಸ್ಯೆಯಿಂದಾಗಿ ಈ ತೊಂದರೆಯಾಗುತ್ತಿದ್ದು, ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುವುದರಿಂದ ಇದನ್ನು ತಡೆಗಟ್ಟಬಹುದಾಗಿದೆ.

ಪ್ರತಿದಿನ ನಿಯಮಿತವಾಗಿ ಹಬೆ ತೆಗೆದುಕೊಳ್ಳುವುದರಿಂದಾಗಿ ಶ್ವಾಸಕೋಶಗಳು ಆರೋಗ್ಯವಾಗಿರುತ್ತದೆ. ಶೀತ, ಕಫಗಳಿದ್ದಲ್ಲಿ ಕರಗಿ ಹೋಗುತ್ತದೆ.ಮೂಗು ಕಟ್ಟುವ ಸಮಸ್ಯೆ ಕಡಿಮೆಯಾಗುತ್ತದೆ. ಜೋರಾಗಿ ಕೆಮ್ಮು ಇದ್ದರೂ ಹಬೆ ತೆಗೆದುಕೊಳ್ಳುವುದರಿಂದ ರಿಲೀಫ್ ಆಗುತ್ತದೆ. ಮಲಗುವ ಮೊದಲು ಹಬೆ ತೆಗೆದುಕೊಂಡರೆ ಸರಿಯಾಗಿ ನಿದ್ರೆಯೂ ಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!