Saturday, October 1, 2022

Latest Posts

ಬೇಬಿ ನಿರೀಕ್ಷೆಯಲ್ಲಿದ್ದಾರೆ ಧ್ರುವ ಸರ್ಜಾ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅದ್ದೂರಿ, ಬಹದ್ದೂರ್‌, ಪೊಗರು ಚಿತ್ರಗಳ ಮೂಲಕ ಕನ್ನಡದ ಪ್ರೇಕ್ಷಕರ ಮನೆಮಾತಾಗಿರುವ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರು ತಮ್ಮ ದಾಂಪತ್ಯ ಜೀವನದ ಹೊಸ ಹಂತಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ತಮ್ಮ ಮೊದಲ ಪುಟ್ಟ ಕಂದಮ್ಮನನ್ನು ಸ್ವಾಗತಿಸಲು ಧ್ರುವ ಸರ್ಜಾ ದಂಪತಿ ಉತ್ಸುಕರಾಗಿದ್ದಾರೆ.

ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದು ದಂಪತಿಗಳಿಬ್ಬರೂ ಮ್ಯಾಟರ್ನಿಟಿ ಪೋಟೋಶೂಟ್‌ ನ ಚಿತ್ರಗಳನ್ನು ಸಾಮಾಜಿಕವಾಗಿ ಹಂಚಿಕೊಂಡಿದ್ದಾರೆ. ದಂಪತಿಗಳಿಬ್ಬರೂ ಪುಟ್ಟ ಮಗುವಿನ ಶೂ ಹಿಡಿದು ಕ್ಯಾಮರಾ ಕಣ್ಣೆದುರು ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ತಮ್ಮ ಬೇಬಿ ಬಂಪ್‌ ನಲ್ಲಿ ಪ್ರೇರಣಾರ ಮುಖದಲ್ಲಿ ತಾಯಿಯಾಗುವ ಕಳೆ ಇದ್ದರೆ ಧ್ರುವ ಸರ್ಜಾ ತಂದೆಯಾಗಲು ಉತ್ಸುಕರಾಗಿದ್ದಾರೆ.

ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಧ್ರುವ ಅವರು ವೀಡಿಯೊದೊಂದಿಗೆ ಹೀಗೆ ಬರೆದಿದ್ದಾರೆ, “ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ, ಶೀಘ್ರದಲ್ಲೇ ಬರಲಿರುವ ಪುಟ್ಟನನ್ನು ಆಶೀರ್ವದಿಸಿ. ಜೈ ಹನುಮಾನ್”

ಡಿಸೆಂಬರ್ 9, 2018 ರಂದು ನಿಶ್ಚಿತಾರ್ಥ ಮಾಡಿಕೊಂಡ ಧ್ರುವ ಸರ್ಜಾ ಮತ್ತು ಪ್ರೇರಣಾ ನವೆಂಬರ್ 2019 ರಲ್ಲಿ ವಿವಾಹವಾದರು. ಪ್ರಸ್ತುತ ತಮ್ಮ ದಾಂಪತ್ಯ ಜೀವನದ ಹೊಸ ಹಂತಕ್ಕೆ ಕಾಲಿಡುತ್ತಿರುವ ಅವರಿಗೆ ಶುಭವಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!